ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಚ್‌ಐವಿ ಜನಜಾಗೃತಿ

Lingaraj Badiger
Updated On : 5 Apr 2013, 11:14 am

ಕಮಲನಗರ: ಕಮಲನಗರದಲ್ಲಿ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿ. ಕಂಪನಿ ವತಿಯಿಂದ ಕಮಲನಗರ ಅಲ್ಲಮಪ್ರಭು ಚೌಕ್ ಹತ್ತಿರ ಹೆಚ್‌ಐವಿ ಕುರಿತಾದ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯ ದಯಾನಂದ ವಡ್ಡೆ ಚಾಲನೆ ನೀಡಿದರು.  ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಿಕ್ರಮ ಮತ್ತು ಮಹೇಶ ಕುಲಕರ್ಣಿ ಹಾಗೂ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿ. ಕಂಪನಿಯ ಪ್ರಧಾನ ವ್ಯವಸ್ಥಾಪಕ ಜಯಪ್ರಕಾಶ, ಜಿಲ್ಲಾ ಆರೋಗ್ಯ ಸಹಾಯಕರಾದ ಸಂತೋಷ ಡಿ.ಕೆ ಅತಿಥಿ ವಿವೆನ್ಸ್ ದೇವರಾಜ ಕಲಾತಂಡದಿಂದ ಬೀದಿ ನಾಟಕ ಕಾರ್ಯಕ್ರಮ ನಡೆಸಿ ಜನರಲ್ಲಿ ಹೆಚ್‌ಐವಿ ಸೋಂಕು ಮತ್ತು ಸುರಕ್ಷತೆಯ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
ಎನ್‌ಸಿಪಿ ಅಭ್ಯರ್ಥಿಗಳು  
ಬೀದರ್: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಿಲ್ಲೆಯ ಎಲ್ಲ 6 ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ.ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ ಆದೇಶದ ಮೇರೆಗೆ ರಾಜ್ಯ ಉಸ್ತುವಾರಿ ಹಾಗೂ ವೀಕ್ಷಕ ಸಂಸದ ಗೋವಿಂದರಾವ ಆದಿಕ್ ಮಾರ್ಗದರ್ಶನದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಲ್ಲದೇ ಶೀಘ್ರದಲ್ಲಿಯೇ ಅಭ್ಯರ್ಥಿಗಳ ಘೋಷಣೆ ಮಾಡಿ ಕಣಕ್ಕೆ ಇಳಿಸುವ ಕುರಿತು ಚರ್ಚೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಾಮಭಾವು ಜಾಧವ ತಿಳಿಸಿದ್ದಾರೆ.
ಸ್ಕೌಟ್ಸ್, ಗೈಡ್ಸ್ ತರಬೇತಿ
ಯಾದಗಿರಿ: ರಾಜ್ಯ ಪುರಸ್ಕಾರ ಪಡೆಯುವ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಮಟ್ಟದ 4 ದಿನಗಳ ತರಬೇತಿ ಶಿಬಿರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ಚಾಲನೆ ನೀಡಿದರು. ಈ ಶಿಬಿರದಲ್ಲಿ ರಾಜ್ಯ ಪಾಲಕ ಪ್ರಶಸ್ತಿ ಪಡೆಯವು ಸಲುವಾಗಿ ನಡೆಯುವ ಪರೀಕ್ಷೆಗೆ ಈ ತರಬೇತಿ ಪ್ರಥಮ ಸೋಪಾನ್, ದ್ವೀತಿಯ ಸೋಪಾನ್, ತೃತಿಯ ಸೋಪಾನ್ ಪ್ರಶಸ್ತಿ ಪಡೆದ ಮಕ್ಕಳಿಗೆ ಈ ತರಬೇತಿ ನೀಡಲಾಗುವುದು. ಜಿಲ್ಲೆಯ 80 ಮಕ್ಕಳು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ರೆಕ್ಟರ್ ಪಾ. ರೆಜ್ಜಿ, ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ರಾಘವೇಂದ್ರ, ಜಿಲ್ಲಾ ಆಯುಕ್ತರು (ಗೈಡ್)  ನಾಗರತ್ನ ಮೂರ್ತಿ ಅನಪುರ, ತರಬೇತಿದಾರರಾದ ಬಸವರಾಜ.ಡಿ. ಸುಲೋಜನಾ ಬೆಂಜಮೀನ್, ರಾಜೇಂದ್ರ ಇತರರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement