'ಕೈ' ಹಿಡಿದ ಯುವಕರ ಪಡೆ
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ನೂರಾರು ಯುವಕರ ಪಡೆ ಬಿಜೆಪಿ ತೊರೆದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹಾಗೂ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಗುಲ್ಬರ್ಗದ ಖರ್ಗೆ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮದ ಯುವ ಮುಖಂಡರಾದ ಶಂಭುಲಿಂಗ ಸಂಗಾವಿ, ಚನ್ನವೀರ ಕಣ್ಣಿಗಿ, ಬನಶಂಕರ ಕೋರಿ, ವೆಂಕಟೇಶ ಕಟ್ಟಿಮನಿ, ವಿಜಯಕುಮಾರ ಏರಿ, ಶೇಖರ ಅಣಿಕೇರಿ, ಗೂಳಿನಾಥ ಹೂಗಾರ, ಮಲ್ಲಿಕಾರ್ಜುನ ಜಾಯಿ, ಸುಭಾಶ್ಚಂದ್ರ ಚೌದ್ರಿ, ದೇವಿಂದ್ರ ಚೌದ್ರಿ, ಶಂಕರ ಜಾಪುರ, ಬಸವರಾಜ ಜೂಟಿ, ನೀಲಕಂಠಯ್ಯ ಸ್ವಾಮಿ, ರಹಿಮಾನ ಬಳಗಾರ, ರಾಘವೇಂದ್ರ ಅಣಿಕೇರಿ, ನಾಗು ಗೌಡನಹಳ್ಳಿ, ಭೀಮಾಶಂಕರ ಭಂಗಿ ಸೇರಿದಂತೆ ನೂರಾರು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಾಗಿ ಹೇಳಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಮಾತನಾಡಿದರು. ಜಿಪಂ ಸದಸ್ಯ ರಮೇಶ ಮರಗೋಳ, ಬ್ಲಾಕ್ ಕಾಂಗ್ರೆಸ್ ಪಜಾ, ಪಪಂ ಘಟಕ ಅಧ್ಯಕ್ಷ ಶಿವರುದ್ರ ಭೀಣಿ, ದಿಗ್ಗಾಂವ ತಾಪಂ ಸದಸ್ಯ ಮಲ್ಲಿನಾಥ ಬಾಗೋಡಿ, ಮಾಪಣ್ಣ ಗಂಜಗಿರಿ, ಸಿದ್ದಣ್ಣಗೌಡ ಆರ್.ಡಿ., ರೇವಣಸಿದ್ದಪ್ಪ ಮಾಸ್ತರ್, ಬಸವರಾಜ ಚಿಟ್ಟಾ ಉಪಸ್ಥಿತರಿದ್ದರು.