ಚುನಾವಣೆಗೆ ವಿಡಿಯೋ ಕಣ್ಗಾವಲು ತಂಡ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.4
ವಿಧಾನಸಭೆ ಚುನಾವಣೆ- 2013ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನಡೆಸುವ ಸಭೆ, ಮೆರವಣಿಗೆ ಮತ್ತು ಸೂಕ್ಷ್ಮ ಘಟನಾವಳಿಗಳನ್ನು ಚಿತ್ರೀಕರಿಸಲು ವಿಡಿಯೋ ಕಣ್ಗಾವಲು ತಂಡ ರಚಿಸುವಂತೆ ಭಾರತ ಚುನಾವಣಾ ಆಯೋಗವು ನಿರ್ದೇಶಿಸಿದೆ.
9 ವಿಧಾನಸಭಾ ಕ್ಷೇತ್ರಗಳಿಗೆ ಕಣ್ಗಾವಲು ತಂಡ ರಚಿಸಲಾಗಿದ್ದು, ಕ್ಷೇತ್ರ ಹಾಗೂ ನೋಡಲ್ ಅಧಿಕಾರಿಗಳ ವಿವರ... ಗುಲ್ಬರ್ಗ ಉತ್ತರ- ಸಿಡಿಪಿಒ ತಿಪ್ಪಣ್ಣ ಸಿರಸಗಿ, ಗುಲ್ಬರ್ಗ. ಗುಲ್ಬರ್ಗ ದಕ್ಷಿಣ- ಎಎಚ್ಒ ಮಲ್ಲೇಶಪ್ಪ. ಗುಲ್ಬರ್ಗ ಗ್ರಾಮೀಣ- ಎಎಚ್ಒ(ಆರ್ಎಸ್ಕೆ) ಲಾಲಪ್ಪ, ಪಟ್ಟಣ.
ಜೇವರ್ಗಿ- ಬಿಇಒ ಗುರಪ್ಪ ಗುಂಡಗುರ್ತಿ, ಜೇವರ್ಗಿ. ಆಳಂದ- ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ಆಳಂದ. ಅಫಜಲ್ಪುರ- ಶಂಕರ ಪಟವಾರಿ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಅಫಜಲ್ಪುರ. ಚಿತ್ತಾಪುರ- ಇಒ(ತಾಪಂ) ಸುರೇಶ ಬಿರಾದಾರ, ಚಿತ್ತಾಪುರ. ಸೇಡಂ- ಬಿಇಒ ಶಿವಶರಣಪ್ಪ ಕೋಬಾಳ, ಗುಲ್ಬರ್ಗ. ಚಿಂಚೋಳಿ- ಸಹಾಯಕ ಎಎಚ್ಒ ಮುನಿಚಲುವಯ್ಯ ಟಿ.ಇ. ಚಿಂಚೋಳಿ.
ತಂಡವು ಕಾಲಕಾಲಕ್ಕೆ ಫ್ಲೈಯಿಂಗ್ ಸ್ಕ್ವಾಡ್, ಲೆಕ್ಕಪತ್ರ ವೀಕ್ಷಣಾ ತಂಡ ಹಾಗೂ ಲೆಕ್ಕಪತ್ರ ತಪಾಸಣಾ ತಂಡ ಹಾಗೂ ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸುತ್ತದೆ.
ಮಾನಿಟರಿಂಗ್ ಸೆಲ್ ರಚನೆ
ಗುಲ್ಬರ್ಗ: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಮೇ 5ರಂದು ನಡೆಯಲಿದೆ. ಭಾರತ ಚುನಾವಣಾ ಆಯೋಗದ ಆದೇಶದಂತೆ ಸಾರ್ವಜನಿಕರಿಂದ ಬರುವ ದೂರು ಕರೆಗಳನ್ನು ಸ್ವೀಕರಿಸಿ ಕರೆಗಳ ವಿಷಯದ ಬಗ್ಗೆ ಅನುಬಂಧ-13ರಲ್ಲಿ ನಮೂದಿಸಿಕೊಂಡು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ದೂರು ಕರೆಗಳನ್ನು ಲೆಕ್ಕಪತ್ರ ವೀಕ್ಷಕರಿಗೆ ಹಾಗೂ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ದೂರುಗಳನ್ನು ಚುನಾವಣಾ ವೀಕ್ಷಕರಿಗೆ ತಕ್ಷಣ ತಿಳಿಸುವುದು ಮತ್ತು ದೂರುಗಳ ಒಂದು ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಲಿದೆ.
ಈ ಕಾರ್ಯಕ್ಕಾಗಿ ಈ ಮುಂದೆ ತೋರಿಸಿದ ಅಧಿಕಾರಿಗಳನ್ನು ಚುನಾವಣಾ ಖರ್ಚು ಮಾನಿಟರಿಂಗ್ ಸೆಲ್ ಕಾರ್ಯ ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಮೀಡಿಯಾ ಸರ್ಟಿಫಿಕೇಷನ್ ಸೆಂಟರ್- ಲಕ್ಷ್ಮೀನಾರಾಯಣ ಜಂಟಿ ಆಯುಕ್ತರು ಕಮರ್ಷಿಯಲ್ ಟ್ಯಾಕ್ಸ್ ಗುಲ್ಬರ್ಗ. ಮಾಧ್ಯಮ ಮತ್ತು ಮಾಹಿತಿ ಸೆಲ್- ಬಿರಾದಾರ ಎಸ್ಒ ಗುಲ್ಬರ್ಗ. ಜಿಲ್ಲಾ ಲೆಕ್ಕಪತ್ರ ವೀಕ್ಷಣಾ ಸೆಲ್- ಪಟ್ವೆಗಾರ ಸಿಎಒ ಜಿಲ್ಲಾ ಪಂಚಾಯಿತಿ, ಪ್ರವೀಣ ಪ್ರಿಯಾ ಜಂಟಿ ನಿರ್ದೇಶಕರು ಎಚ್ಕೆಡಿಬಿ ಮತ್ತು ಶ್ರೀಕಾಂತ ದೇಶಮುಖ ಎಸಿಎಫ್ ಎಚ್ಕೆಡಿಬಿ ಗುಲ್ಬರ್ಗ.