ಚಿತ್ತಾಪುರದಲ್ಲಿ ನಾಳೆ ಕಾವ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.5
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕು ಮಟ್ಟದ ಕಾವ್ಯ ಸಮ್ಮೇಳನವನ್ನು ಏ.7 ರಂದು ಭಾನುವಾರ ಅಕ್ಕಮಹಾದೇವಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ತಿಳಿಸಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪತ್ರಕರ್ತ, ಸಾಹಿತಿ ಮಂಡಲಗಿರಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಯುವ ಕವಿಗೋಷ್ಠಿ, ಮಹಿಳಾ ಕವಿಗೊಷ್ಟಿ, ಹಿರಿಯ ಕವಿಗೊಷ್ಠಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಯುವ, ಮಹಿಳಾ, ಹಿರಿಯ 55 ಕವಿಗಳು ಭಾಗವಹಿಸಿ ಕವನ ವಾಚನ ಮಾಡಲಿದ್ದಾರೆಂದು ತಿಳಿಸಿದ್ದಾರೆ.
ಏ.7 ರಂದು ಬೆಳಗ್ಗೆ 10.30ಕ್ಕೆ ಕಾವ್ಯ ಸಮ್ಮೇಳನವನ್ನು ನಿವೃತ್ತ ಪ್ರಾಚಾರ್ಯ ಸ್ವಾಮಿರಾವ ಕುಲಕರ್ಣಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರಡ್ಡಿ ಮೂನ್ನೂರ, ವೀರಣ್ಣಗೌಡ ಪರಸರಡ್ಡಿ ನಾಲವಾರ ಆಗಮಿಸುವರು.
11.30ಕ್ಕೆ ಯುವ ಕವಿಗೋಷ್ಠಿ ಆಧ್ಯಕ್ಷತೆಯನ್ನು ಯುವ ಸಾಹಿತಿ ಕಿರಣ ಪಾಟೀಲ್ ವಹಿಸುವರು. ಶಹಾಬಾದ್ ಕಸಾಪ ಅಧ್ಯಕ್ಷ ಸಂತೋಷ ಇಂಗನಶೆಟ್ಟಿ, ವಿಶ್ವ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮಧ್ಯಾಹ್ನ 2ಕ್ಕೆ ಮಹಿಳಾ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಭವನೇಶ್ವರಿ ಚಿಮಕೋಡೆ ವಹಿಸುವರು. ರೇಣುಕಾ ಡಾಂಗೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ, ನಿವೃತ್ತ ಶಿಕ್ಷಕ ಮಲ್ಲಣ್ಣ ಮಾಸ್ತರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಹಿರಿಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಎಸ್.ಪಿ. ಸುಳ್ಳದ್ ವಹಿಸುವರು. ಗುಲ್ಬರ್ಗ ತಾಲೂಕು ಕಸಾಪ ಅಧ್ಯಕ್ಷ ಜಿ.ಎಸ್. ಮಾಲಿಪಾಟೀಲ್, ನಿವೃತ್ತ ಶಿಕ್ಷಕ ಚಂದ್ರಶೇಖರ ಮದಿಗ್ಗಾಂವಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ 4ಕ್ಕೆ ಸಮಾರೋಪ ಸಮಾರಂಭದ ಭಾಷಣವನ್ನು ಪ್ರಾಧ್ಯಾಪಕ ಡಾ. ಶಂಕರ ಸೋಮಾಯಾಜಿ ಮಾಡುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಎಚ್. ನಿರಗುಡಿ, ಗಂಗಾ ಪರಮೇಶ್ವರಿ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಬಿರಾದಾರ ಭಾಗವಹಿಸುವರು.