ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರಾಜುಗೌಡರ ಸೋಲು ಖಚಿತ'

Lingaraj Badiger
Updated On : 6 Apr 2013, 11:26 am

ಸುರಪುರ: ಮಾಜಿ ಶಾಸಕ ಮತ್ತು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕರ ಗೆಲವು ನಿಶ್ಚಿತವಾಗಿದ್ದು, ಮಾಜಿ ಶಾಸಕ ರಾಜುಗೌಡರ ಸೋಲು ಖಚಿತ ಎಂದು ಪುರಸಭೆ ಮಾಜಿ ಸದಸ್ಯ ಸೋಮನಾಥ ಡೊಣ್ಣಿಗೇರಾ ತಿಳಿಸಿದ್ದಾರೆ. ಮಾಜಿ ಶಾಸಕ ರಾಜುಗೌಡರ ಪೊಳ್ಳು ಆಶ್ವಾಸನೆ ಮತ್ತು ನಾಟಕೀಯ ಮಾತುಗಳಿಂದ ತಾಲೂಕಿನ ಜನತೆ ರೋಸಿ ಹೋಗಿದ್ದಾರೆ. ಕಳೆದ 10 ವರ್ಷಗಳಿಂದ ಕ್ಷೇತ್ರದ ಜನರನ್ನು ವಂಚಿಸುತ್ತಾ ಬಂದಿದ್ದಾರೆ. ಯಾವುದೇ ಒಂದು ಪಕ್ಷಕ್ಕೆ ಸೀಮಿತಗೊಳ್ಳದೇ ಎಲ್ಲ ಪಕ್ಷದವರಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಕ್ಷೇತ್ರದ ಜನತೆಗೆ ದಿಕ್ಕು ತಪ್ಪಿಸುವ ಜೊತೆಯಲ್ಲಿ ತಾವು ದಿಕ್ಕು ತಪ್ಪಿ ಒದ್ದಾಡುವಂತ ಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ವಿಶ್ವಾಸ ಉಳಿಸಿಕೊಳ್ಳದ ರಾಜುಗೌಡರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಜಯ ಖಚಿತ ಎಂದು ಡೊಣ್ಣಿಗೇರಾ ತಿಳಿಸಿದ್ದಾರೆ.

ಸ್ನೇಹ ಸಮ್ಮೇಳನ
ಗುಲ್ಬರ್ಗ: ನಗರದ ಎಂಜೆಪಿ ಶಿಕ್ಷಣ ಸಂಸ್ಥೆಯ ಮಹಾತ್ಮ ಜ್ಯೋತಿಬಾ ಫುಲೆ ಪದವಿ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏ.6ರಂದು ಬೆ. 10 ಗಂಟೆಗೆ ಕುಸನೂರ್ ರಸ್ತೆಯ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement