ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಂಇಎಸ್‌ಗೆ ಬಿಜೆಪಿ ಟಿಕೆಟ್:ಕತ್ತಿ, ಅಂಗಡಿ ಮನೆಗೆ ಮುತ್ತಿಗೆ

Vishwanath S
Updated On : 7 Apr 2013, 1:06 am

ಕ.ಪ್ರ. ವಾರ್ತೆ, ಬೆಳಗಾವಿ, ಏ.6
ಮರಾಠಿ ಮತಗಳ ಬೇಟೆಗೆ ಮುಂದಾಗಿರುವ ಬಿಜೆಪಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಎಂಇಎಸ್ ನಾಯಕನಿಗೆ ಮಣೆ ಹಾಕಿದೆ. ಇದರಿಂದ ಕಂಗಾಲಾದ ಸ್ಥಳೀಯ ಮುಖಂಡರು ಕೃಷಿ ಸಚಿವ ಉಮೇಶ ಕತ್ತಿ ಹಾಗೂ ಸಂಸದ ಸುರೇಶ ಅಂಗಡಿ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಹಾಗೂ ನ್ಯಾಯವಾದಿ ಅನಿಲ ಬೆನಕೆ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಎಂಇಎಸ್‌ನ ಮರಾಠಿ ಯುವ ಭಾಷಿಕ ಆಘಾಡಿಯ ನಾಯಕ ಕಿರಣ ಜಾಧವ ಅವರಿಗೆ ಟಿಕೆಟ್ ನೀಡಿದ್ದರಿಂದ ಶುಕ್ರವಾರ ರಾತ್ರಿಯೇ ಅನಿಲ ಬೆನಕೆ ಬೆಂಬಲಿಗರು ಸಂಸದ ಸುರೇಶ ಅಂಗಡಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಶನಿವಾರ ಬೆಳಗ್ಗೆ ಕೃಷಿ ಸಚಿವ ಉಮೇಶ ಕತ್ತಿ ಅವರ ಮನೆಗೂ ಮುತ್ತಿಗೆ ಹಾಕಿ ಪಕ್ಷದ ನಿಷ್ಠರಿಗೆ ಟಿಕೆಟ್ ನೀಡಬೇಕು. ಬೇರೆ ಕ್ಷೇತ್ರದವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು. ಸಚಿವರ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡಿರುವ ಬಿಜೆಪಿ ಕಾರ್ಯಕರ್ತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement