ಸಿಪಿಎಂ 16 ಅಭ್ಯರ್ಥಿಗಳು ಕಣಕ್ಕೆ
ಕ.ಪ್ರ. ವಾರ್ತೆ , ಬೆಂಗಳೂರು, ಏ.6
ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಶನಿವಾರ 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಶನಿವಾರ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ನಾಗರಾಜ್, ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಅಧೋಗತಿಗೆ ಇಳಿಸಿದೆ. ಒಳಜಗಳದಿಂದಾಗಿ ರಾಜ್ಯದ ಸಮಾನ್ಯ ಜನರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಗಮನ ಹರಿಸಿಲ್ಲ. ಅಧಿಕಾರ ಲಾಲಸೆಯಲ್ಲಿ ತುಂಬಿ ಹೋಗಿರುವ ಬಿಜೆಪಿ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯಬೇಕು ಎಂದರು. ರಾಜ್ಯದಲ್ಲಿ ಅದಿರು ಕೊಳ್ಳೆ ಹೊಡೆಯುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಪ್ರಶ್ನಿಸಬೇಕಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ನೈತಿಕತೆಯನ್ನು ಕಳೆದುಕೊಂಡಿದೆ. ಹೀಗಾಗಿ ಬಿಜೆಪಿಗೆ ಕಾಂಗ್ರೆಸ್ ಪಕ್ಷವೂ ಪರ್ಯಾಯವಲ್ಲ ಎಂದು ನಾಗರಾಜ್ ಹೇಳಿದರು.
ಬಾಗೇಪಲ್ಲಿ - ಜಿ.ವಿ.ಶಿವರಾಮರೆಡ್ಡಿ (ಮಾಜಿ ಶಾಸಕರು)
ಗೌರಿಬಿದನೂರು - ಸಿ.ಎಸ್.ಅಶ್ವತ್ಥಪ್ಪ
ಚಿಂತಾಮಣಿ - ಸಿ.ಗೋಪಿನಾಥ್
ಕೆ.ಜಿ.ಎಫ್ - ಸಿ.ತಂಗರಾಜ್
ದೊಡ್ಡಬಳ್ಳಾಪುರ - ಆರ್.ಚಂದ್ರತೇಜಸ್ವಿ
ಕೆ.ಆರ್.ಪುರಂ - ಗೌರಮ್ಮ
ಆನೇಕಲ್ - ಡಿ.ಮಾದೇಶ
ಮಳವಳ್ಳಿ - ಕೆ.ಬಸವರಾಜ್
ಮಂಗಳೂರು ದಕ್ಷಿಣ - ವಂಸತ ಆಚಾರಿ
ಮಂಗಳೂರು - ಕೃಷ್ಣಪ್ಪ ಸಾಲಿಯಾನ
ಬೆಳ್ತಂಗಡಿ - ಬಿ.ಎಂ.ಭಟ್
ಕಂಪ್ಲಿ - ಶಿವಶಂಕರ
ಹೊಸಪೇಟೆ - ಆರ್.ಭಾಸ್ಕರರೆಡ್ಡಿ
ಕನಕಗಿರಿ - ಎ.ಹುಲುಗಪ್ಪ
ಬೈಂದೂರು - ಕೆ.ಶಂಕರ
ಗುಲ್ಬರ್ಗಾ ಗ್ರಾಮೀಣ - ಮಾರುತಿ ಮಾನ್ಪಡೆ