ಪ್ರಿಯಾಂಕ್ ಸಂಘಕ್ಕೆ ಆಯ್ಕೆ
ಗುಲ್ಬರ್ಗ: ಕಮಲಾಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಭೀಮರಾವ್ ಬಿ. ಉದನೂರಕರ್ ಅಧ್ಯಕ್ಷತೆಯಲ್ಲಿ ಸರ್ವಾನುಮತದಿಂದ ಕಮಲಾಪುರ ತಾಲೂಕು ಪದಾಧಿಕಾರಿಗಳ ನೇಮಕ ಮಾಡಲಾಯಿತು. ಮಿಲಿಂದ ಎಂ. ಮೇಲಿನಕೇರಿ ಅಧ್ಯಕ್ಷ, ರಾಜೇಶ ಎನ್. ಮುತ್ತಂಗಿ ಉಪಾಧ್ಯಕ್ಷ, ದತ್ತು. ವಿ. ಶಾಖ್ ಪ್ರಧಾನ ಕಾರ್ಯದರ್ಶಿ, ಯಶವಂತ ಕಾಂಬಳೆ ಖಜಾಂಚಿ, ಸುಭಾಷ ಗೌರೆ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.
ರಾಹುಲ್ ವಿ.ಎನ್. ಆನಂದ ಗೌರೆ, ದೇವಾ ಎಂ. ಜಿ., ಅಮರ, ಮಂಜುನಾಥ, ರಾಣೋಜಿ, ರಾಮಲಿಂಗ, ಭರತಕುಮಾರ ಎಸ್. ಸಾವಳಗಿ, ಜೈಬೀಮ ಕಟ್ಟಮನಿ, ಸುಭಾಷ ಎಸ್. ಕಟ್ಟಿಮನಿ, ಮಲ್ಲಿಕಾರ್ಜುನ ಬೆಡಸೂರ, ಅಶೋಕ ಬೆಡಸೂರ, ರಾಘವೇಂದ್ರ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷ ಭೀಮರಾವ್ ಬಿ. ಉದನೂರಕರ್ ತಿಳಿಸಿದ್ದಾರೆ.