ಕರಿಬಸವೇಶ್ವರಶ್ರೀ 101ನೇ ಜನ್ಮದಿನ
ಗುಲ್ಬರ್ಗ: ತಾಲೂಕಿನ ಹೊನ್ನಕಿರಣಗಿ ರಾಚೋಟೇಶ್ವರ ಸಂಸ್ಥಾನ ಮಠದ ರೇಣುಕಾಚಾರ್ಯ ಪ್ರಶಸ್ತಿ ವಿಜೇತ ಕರಿಬಸವೇಶ್ವರ ಶಿವಾಚಾರ್ಯರ 101ನೇ ಹುಟ್ಟುಹಬ್ಬ, ಬೆಳ್ಳಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಏ.19ರವರೆಗೆ ಜರುಗಲಿವೆ. ಕರಿಬಸವೇಶ್ವರ ಶಿವಾಚಾರ್ಯರ ಸ್ವ-ವಿರಚಿತ ಬರೆದ ವೀರಭದ್ರೇಶ್ವರ ಪುರಾಣ ಕಾರ್ಯಕ್ರಮವನ್ನು ಕೆಜೆಪಿ ಮುಖಂಡ ಎಂ.ವೈ. ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ಕರಿಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಠದ ಚಂದ್ರಗುಂಡ ಶಿವಾಚಾರ್ಯ ನೇತೃತ್ವವಹಿಸಿ ಮಠದ ಏಳ್ಗೆಗಾಗಿ ಭಕ್ತರು ತನು, ಮನ, ಧನದಿಂದ ಹಿರಿಯ ಪೂಜ್ಯರಿಗೆ ಗೌರವ ವಂದನೆ ಸಲ್ಲಿಸಬೇಕೆಂದರು. ಎಸ್ಪಿ ಯುವ ಮುಖಂಡ ವಿಕ್ರಮ ಭಟ್ ಮಾತನಾಡಿದರು. ತುಕಾರಾಮಗೌಡ ಪಾಟೀಲ್, ರಾಜಕುಮಾರ ಪಾಟೀಲ್, ಡಾ. ಕೇಶವ ಕಾಬಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿವೃತ್ತ ಎಂಜಿನೀಯರ್ ವಿ.ಎಚ್. ಅಗರಖೇಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನಕಿರಣಗಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಯೋಗಪ್ಪ ವಗ್ದರ್ಗಿ ಅಧ್ಯಕ್ಷತೆ ವಹಿಸಿದ್ದರು.