'ವಿದ್ಯುತ್ ಪೂರೈಸಿ'
ಗುಲ್ಪರ್ಗ: ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ 3 ಫೇಸ್ ವಿದ್ಯುತ್ನ್ನು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡದಿರುವುದರಿಂದ ನೀರಾವರಿ ಮಾಡುತ್ತಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈಗಿನ ವ್ಯವಸ್ಥೆಯಂತೆ ಹಗಲೊತ್ತಿನಲ್ಲಿ ಮೂರು ಗಂಟೆ ಮತ್ತು ರಾತ್ರಿಯಲ್ಲಿ 3 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ. ಇದರ ಜೊತೆಗೆ ಇನ್ನೂ ಎರಡು ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಹೆಚ್ಚಳ ಮಾಡಬೇಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿವಶೆಟ್ಟಿ ಆಗ್ರಹಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಹಗಲು ಹೊತ್ತಿನಲ್ಲಿಯೇ 3 ಫೇಸ್ 8 ಗಂಟೆ ವಿದ್ಯುತ್ ಸರಬರಾಜು ಮಾಡಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾತ್ರಿ ಹೊತ್ತಿನಲ್ಲಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲು ಶಿವಶೆಟ್ಟಿ ಪಾಟೀಲ್, ರಾಜನಾಳ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ತೊಂದರೆ: ರಾತ್ರಿ ಹೊತ್ತಿನಲ್ಲಿ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ವಿಷ ಜಂತುಗಳ ಹಾವಳಿಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ರೈತರು ಹೊಲಗಳಿಗೆ ಹೋಗಲು ಹೆದರುವಂತಾಗಿದೆ. ಅದೇ ರೀತಿ ಕಾಡು ಪ್ರಾಣಿಗಳು ರೈತರ ಮೇಲೆ ದಾಳಿ ಮಾಡುತ್ತಿವೆ. ಆದ್ದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಹೊಲಗಳಿಗೆ ವಿದ್ಯುತ್ ಸರಬರಾಜು ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಪದೇ ಪದೇ ವಿದ್ಯುತ್ ಕಡಿತಗೊಳಿಸುವುದರಿಂದ ಹೊಲದಿಂದ ಮನೆಗೆ, ಮನೆಯಿಂದ ಹೊಲಕ್ಕೆ ಅಲೆದಾಡುವಂತಾಗಿದೆ. ನಿಗದಿತ ವಿದ್ಯುತ್ ಸರಬರಾಜು ಅವಧಿಯಲ್ಲಿ ವಿದ್ಯುತ್ ಕಡಿತ ಮಾಡಬಾರದೆಂದು ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆ ನಿಗದಿ ಮಾಡದಿದ್ದರೆ ಮುಖ್ಯ ಅಭಿಯಂತರರು ವಿದ್ಯುತ್ ಸರಬರಾಜು ಕಂಪನಿ ಗುಲ್ಬರ್ಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯುತ್ ವ್ಯತ್ಯಯ
ಚಿಂಚೋಳಿ: ಚಂದಾಪುರ ನಗರ ಪ್ರದೇಶ ಸೇರಿದಂತೆ ತಾಲೂಕಿನ ಸುಲೇಪೇಟ್, ನಿಡಗುಂದಾ, ಚಿಮ್ಮನಚೋಡ, ಕುಂಚಾವರಂ, ರಟಕಲ್, ಮಿರಿಯಾಣ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಿಕೆ.ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ಸಮಸ್ಯೆ ಮತ್ತು ರಾಜ್ಯದಲ್ಲಿಯೂ ವಿದ್ಯುತ್ ಅಭಾವ ಸಮಸ್ಯೆ ಇದ್ದ ಕಾರಣ ವಿದ್ಯುತ್ ಪೂರೈಕೆಯಲ್ಲಿ ನಿಯಮಿತ ಹಾಗೂ ಅನಿಯಮಿತ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಅಡೆತಡೆಗಳು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಆದೇಶ ಮೇರೆಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾದರೆ ಗ್ರಾಹಕರು ಸಹಕರಿಸಬೇಕೆಂದು ಚಿಂಚೋಳಿ ಸಹಾಯಕ ಅಭಿಯಂತರ ಪಿ.ಡಿ. ಮಂಗಲೇಶ ಮನವಿ ಮಾಡಿದ್ದಾರೆ.