ಅಗ್ನಿ ಅನಾಹುತ: 4 ಅಂಗಡಿ ಭಸ್ಮ
ಶಹಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಾಲ್ಕು ಅಂಗಡಿಗಳು ಭಸ್ಮವಾದ ಘಟನೆ ಪಟ್ಟಣದ ಗ್ಯಾರೇಜ್ ಲೈನ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ.
ಘಟನೆಯಿಂದ ಸುಮಾರು 17 ಲಕ್ಷ ರು.ಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಇಲ್ಲಿನ ಗ್ಯಾರೇಜ್ ಲೈನ್ನಲ್ಲಿ ಟೈರ್ ರಿವೈಂಡಿಂಗ್, ಟ್ರ್ಯಾಕ್ಟರ್ ರಿಪೇರಿ, ಬ್ಯಾಟರಿ ಚಾರ್ಜಿಂಗ್, ಗ್ಯಾಸ್ ವೆಲ್ಡಿಂಗ್ ಹೀಗೆ ನಾಲ್ಕು ಅಂಗಡಿಗಳು ಅಗ್ನಿಗೆ ಆಹುತಿಯಾಗಿವೆ. ಮೋತಿರಾಜ ಅರುಣದಾಸ ಅವರಿಗೆ ಸೇರಿದ ಈ ಅಂಗಡಿಗಳಲ್ಲಿ ಟ್ರಾಕ್ಟರ್, ರಿವೈಂಡಿಂಗ್, ಬ್ಯಾಟರಿಗಳು, ಟೈರ್ಗಳು ಸೇರಿದಂತೆ ಅನೇಕ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ ಎಂದು ಮಾಲೀಕರು ತಿಳಿಸಿದ್ದಾರೆ.
ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿತು. ಅಗ್ನಿಶಾಮಕ ದಳದ
ಠಾಣಾಧಿಕಾರಿ ರೇವಣಸಿದ್ದಪ್ಪ ಪುಟ್ಟಿ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದರು. ಆದರೂ ಅಷ್ಟರೊಳಗೆ ಬೆಂಕಿ ತನ್ನ ಕೆನ್ನಾಲಗೆ ಚಾಚಿ ಸಾಮಗ್ರಿಗಳನ್ನು ಆಹುತಿ ತೆಗೆದುಕೊಂಡಿತ್ತು.