ಚಂದನಕೇರಾದಲ್ಲಿ ಕುಡಿವ ನೀರಿಗೆ ಹಾಹಾಕಾರ
ಚಿಂಚೋಳಿ: ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಕುಡಿವ ನೀರಿನ ಹಾಹಾಕಾರ ಇದ್ದರೂ ಸಹ ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯ ತುಕಾರಾಮ ಬಸಂತಪುರ, ಹಣಮಂತ ಪೂಜಾರಿ ಆರೋಪಿಸಿದ್ದಾರೆ. ಗ್ರಾಮದಲ್ಲಿರುವ ಬೋರ್‌ವೆಲ್‌ಗಳು ಕೆಟ್ಟಿವೆ ಮತ್ತು ಕುಡಿಯುವ ನೀರು ಸರಬರಾಜು ಮಾಡುವ ಎಲ್ಲ ಪೈಪ್‌ಗಳು ಒಡೆದಿವೆ. ಇದರಿಂದಾಗಿ ದನಕರುಗಳು ನೀರಿಗಾಗಿ ಪರಿತಪಿಸಬೇಕಾಗಿದೆ ಎಂದರು. ಕೂಡಲೇ ಮೇಲಧಿಕಾರಿಗಳು ಗಮನ ಹರಿಸಬೇಕೆಂದು ತುಕಾರಾಮ ಬಸಂತಪುರ, ಹಣಮಂತ, ಹಣಮಂತ, ಚಂದ್ರಪ್ಪ, ಶ್ರೀಮಂತ ಒತ್ತಾಯಿಸಿದ್ದಾರೆ.