ಬಹಿರಂಗ ಚರ್ಚೆಗೆ ಬರಲಿ: ಗುತ್ತೇದಾರ ಪಂಥಾಹ್ವಾನಕನ್ನಡಪ್ರಭ ವಾರ್ತೆ ಆಳಂದ ಏ.9ವೈಯಕ್ತಿಕ ಆರೋಪ ಕೈ ಬಿಟ್ಟು ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಕೆಜೆಪಿ ರಾಜ್ಯ ವಕ್ತಾರ ಬಿ.ಆರ್. ಪಾಟೀಲ್ ಅವರಿಗೆ
ಕನ್ನಡಪ್ರಭ ವಾರ್ತೆ ಆಳಂದ ಏ.9
ವೈಯಕ್ತಿಕ ಆರೋಪ ಕೈ ಬಿಟ್ಟು ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಕೆಜೆಪಿ ರಾಜ್ಯ ವಕ್ತಾರ ಬಿ.ಆರ್. ಪಾಟೀಲ್ ಅವರಿಗೆ ಶಾಸಕ ಸುಭಾಷ ಗುತ್ತೇದಾರ ಬಹಿರಂಗವಾಗಿಯೇ ಪಂಥಾಹ್ವಾನ ನೀಡಿದರು.
ಪಟ್ಟಣದ ಎ.ವಿ. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಯುವ ಘಟಕದ ಆಶ್ರಯದಲ್ಲಿ ನಡೆದ ಯುವ ಶಕ್ತಿ ಜಾಗೃತಿ ಸಮಾವೇಶ ಹಾಗೂ ಬೈಕ್ ರ್ಯಾಲಿ ಉದ್ದೇಶಿಸಿ ಮಾತನಾಡಿ, ಪಕ್ಷಕ್ಕೆ ಯುವಕರೇ ಆಸ್ತಿಯಾಗಿದ್ದು, ಯುವ ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದರೆ ವಿರೋಧಿಗಳು ಚುನಾವಣೆಯಲ್ಲಿ ನಿಲ್ಲಬೇಕೋ, ಬೇಡವೋ ಎಂಬುದು ವಿಚಾರಿಸಬೇಕು ಎಂದು ವ್ಯಂಗ್ಯವಾಡಿದರು. ಮುಖಂಡ ಅಬ್ದುಲ್ ಸಲಾಂ ಸಗರಿ, ಅಶೋಕ ಸಾವಳೇಶ್ವರ, ಶ್ರೀಶೈಲ್ ಪಾಟೀಲ್ ವಿಭೂತೆ, ಮಹಾದೇವ ಹತ್ತಿ, ಚನ್ನಬಸವ ಪಾಟೀಲ್, ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಶೇಖರ ಪಾಟೀಲ್, ದಯಾನಂದ ಸಾಲೇಗಾಂವ, ದರ್ಗಾ ಕಮಿಟಿ ಅಧ್ಯಕ್ಷ ಅಫಜಲ್ ಅನ್ಸಾರಿ, ಭೀಮಾಶಂಖರ ಕದಂ ಮಾತನಾಡಿದರು.
ಯುವ ಘಟಕದ ಅಧ್ಯಕ್ಷ ಸುನೀಲ್ ಮಾಲಿಪಾಟೀಲ್, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅನೇಕರು ಇದ್ದರು. ಬಾಬುಗೌಡ ಭೂಸನೂರ ಒಳಗೊಂಡು ಕೆಜೆಪಿ, ಬಿಜೆಪಿ, ಕಾಂಗ್ರೆಸ್ಸಿನ ಅನೇಕ ಮಂದಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಕ್ಕೆ ಶಾಸಕರು ಸ್ವಾಗತಿಸಿದರು. ಅಪ್ಪಾಸಾಬ್ ಗುಂಡೆ ನಿರೂಪಿಸಿದರು.