ಇವು ಬೆಂಕಿಪೆಟ್ಟಿಗೆಗಳಲ್ಲ, ಅಪಾರ್ಟ್ಮೆಂಟ್ಗಳು...
ಹಾಂಕಾಂಗ್: ಈ ಚಿತ್ರಗಳನ್ನು ನೋಡಿದರೆ ಬೆಂಕಿಪೆಟ್ಟಿಗೆಗಳನ್ನು ಸಾಲಾಗಿ ಜೋಡಿಸಿಟ್ಟಂತೆ ಕಾಣುತ್ತಿದೆಯೇ? ಇವುಗಳು ಅಪಾರ್ಟ್ಮೆಂಟ್ಗಳೆಂದರೆ ನೀವು ನಂಬುತ್ತೀರಾ?
ನಂಬಲೇಬೇಕು. ಜನಸಂಖ್ಯಾ ಸ್ಫೋಟ ಜನರನ್ನು ಈ ಮಟ್ಟಿಗೆ ತಂದಿಟ್ಟಿದೆ. ಜನರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸ್ಥಳಾವಕಾಶದ ತೀವ್ರ ಕೊರತೆ ಕಾಡುತ್ತಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ಜನ 'ಮೇಲೆ' ನೋಡುತ್ತಾರೆ. ಅಂದರೆ, ಗಗನದೆತ್ತರ ಕಟ್ಟಡಗಳನ್ನು ಕಟ್ಟುತ್ತಾ ಮೇಲೆ ಮೇಲೆ ಬದುಕಲು ಆರಂಭಿಸುತ್ತಾರೆ. ಇಲ್ಲಿ ಕೂಡಾ ಇದೇ ಆಗಿದ್ದು.
ಅಂದ ಹಾಗೆ ಸಣ್ಣ ಘನಾಕೃತಿಗಳ ಗುಂಪಿನಂತೆ ಕಾಣುವ ಈ ಅಪಾರ್ಟ್ಮೆಂಟ್ಗಳಿರುವುದು ಹಾಂಕಾಂಗ್ನಲ್ಲಿ. ಕೇವಲ 424 ಚದರ ಮೈಲುಗಳ ಪ್ರದೇಶದಲ್ಲಿ ಬರೋಬ್ಬರಿ 70 ಲಕ್ಷ ಜನರು ವಾಸವಿರಬೇಕಾಗಿದೆ. ಸ್ಥಳಾವಕಾಶದ ಕೊರತೆ ಹಾಗೂ ಜನಸಂಖ್ಯೆಯ ಪ್ರಮಾಣ ಹೆಚ್ಚಳವು ಜನರನ್ನು ಟಾಯ್ಲೆಟ್ನಷ್ಟು ದೊಡ್ಡ ಕೋಣೆಯಲ್ಲಿ ಬದುಕು ಸಾಗಿಸುವಂತೆ ಮಾಡುತ್ತಿದೆ.
ಹಾಂಕಾಂಗ್ನ ಪರಿಸ್ಥಿತಿ ಹೀಗಾದರೆ, ಉದ್ಯಾನನಗರಿ ಬೆಂಗಳೂರು ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವಂತಿದೆ. ದಿನೇ ದಿನೇ ಗಗನಚುಂಬಿ ಕಟ್ಟಡಗಳು ತಲೆಎತ್ತುತ್ತಿವೆ. ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಅಷ್ಟೊಂದು ಜನರಿಗೆ ಸೂರು ಕಲ್ಪಿಸುವ ಸಲುವಾಗಿ ಕಟ್ಟಡಗಳ ಅಂತಸ್ತುಗಳು ಏರುತ್ತಲೇ ಇವೆ. ಇವೆಲ್ಲವನ್ನೂ ನೋಡಿದರೆ ನಾವೂ ಹಾಂಕಾಂಗ್ನಂತಹ ಪರಿಸ್ಥಿತಿಯನ್ನು ಕಾಣುವ ದಿನ ದೂರವಿಲ್ಲ ಎಂದೆನಿಸುತ್ತಿದೆ.