ಕಾಂಗ್ರೆಸ್‌ಗೆ ಸೇರ್ಪಡೆ
ಸುರಪುರ: ಸಮೀಪದ ರಂಗಂಪೇಟೆ, ಹೆಬ್ಬಾಳ, ಮಾರನಾಳ ತಂಡ. ದ್ಯಾಮನಾಳ ಗ್ರಾಮದ ರಾಜುಗೌಡರ ಅನೇಕ ಕಾರ್ಯಕರ್ತರು ಗುರುವಾರ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ರಂಗಂಪೇಟೆ ಶರೀಪ ಅಹ್ಮದ ಗೋಗಿ, ನಹೀಂ ಗೋಗಿ, ನಜೀರ್ ಅಹ್ಮದ್, ಅಬ್ದುಲ್ ಖಲೀಮ್ ಸಗರ, ಖಲೀಮ ಜಾಮಾ, ಮನ್ಸೂರು ಪಟೇಲ್, ಶಂಷುದ್ದೀನ್, ಅಬ್ದುಲ್ ಸಲಾಮ್, ಆಶೀಯಾಪುದ್ದೀನ್, ಜಾಹೀದ್ ಹುಸೇನ್, ತೌಫೀಕ್ ತಂಬಾಕವಾಡೆ, ಕಮರ, ಸರಮತ್. ಹೆಬ್ಬಾಳ ಗ್ರಾಮದ ಗುರುನಾಥರೆಡ್ಡಿ, ಪರತರೆಡ್ಡಿ, ಶರಣಗೌಡ ಮಾಲಿ ಪಾಟೀಲ್, ಹಣಮಂತ್ರಾಯ ಗೌಡ, ಮಲ್ಲಯ್ಯ ಗುತ್ತೇದಾರ್, ಶಿವರಾಯಗೌಡ ಪಾಟೀಲ್ ಸೇರ್ಪಡೆಯಾದರು. ಮಾರನಾಳ ತಾಂಡದ ಬಾಬು, ದೀರು ನಾಯಕ, ಸೂರಪ್ಪ ನಾಯಕ, ಭೀಮನಾಯಕ, ನಾರಾಯಣನಾಯಕ, ಮೋತಿಲಾಲ್, ಭೀಮಸಿಂಗ್ ನಾಯಕ, ರಮೇಶ ನಾಯಕ ದ್ಯಾಮನಾಳ, ಹೆಮನಪ್ಪ ದೇವರಮನಿ, ಹಣಮಂತ, ಭೀಮಣ್ಣ, ಮಾನಪ್ಪ, ಸಣ್ಣ ಹೆಮನಪ್ಪ, ಬಸವರಾಜ, ಶ್ರೀಕಾಂತ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಮಾಜಿ ಸಂಸದ ರಾಜಾ ರಂಗಪ್ಪನಾಯಕ, ರಾಜಶೇಖರಗೌಡ ಪಾಟೀಲ್, ಸೂಲಪ್ಪ ಕಮತಗಿ, ವೆಂಕೋಬ ಸಾಹುಕಾರ್, ತಿಪ್ಪರಾಜಗೌಡ , ಚಂದ್ರಶೇಖರ, ಬಸನಗೌಡ ಯಡಿಯಾಪುರ ಇತರರಿದ್ದರು.
ಪತ್ನಿ ಕೊಂದು ನೇಣಿಗೆ ಶರಣು
ಯಾದಗಿರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕೊಡಲಿಯಿಂದ ಬರ್ಬರವಾಗಿ ಹತ್ಯೆ ಮಾಡಿ ನಂತರ ಆಕೆಯ ಪತಿ ನೇಣಿಗೆ ಶರಣಾದ ಘಟನೆ ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಜುಗುಲಪ್ಪ (48) ಗುರುವಾರ ಬೆಳಗಿನ ಜಾವ ತನ್ನ ಹೆಂಡತಿ ದುರ್ಗಮ್ಮಳ (42) ಶೀಲ ಶಂಕಿಸಿ ಜಗಳವಾಡಿದ. ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಜುಗುಲಪ್ಪ ಕೂಡ ಬೆಂಡೆಬೆಂಬಳಿಗಿಯಿಂದ ಸುಮಾರು 10 ಕಿಮೀ ದೂರವಿರುವ ತುಮಕೂರ ಗ್ರಾಮದ ಸಮೀಪ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಿಂದ ಕಂಗಾಲಾಗಿರುವ ದಂಪತಿಯ 6 ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಾಯಿ ಸಾಗಾಟ, ಇಬ್ಬರ ಬಂಧನ
ಶಹಾಪುರ: ಅಕ್ರಮವಾಗಿ ಬೈಕ್‌ನಲ್ಲಿ ಸಾರಾಯಿ ಸಾಗಿಸುತ್ತಿದ್ದ ಇಬ್ಬರನ್ನು ಇಲ್ಲಿಯ ಅಬಕಾರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲಕ್ಷ್ಮಣ ಚವ್ಹಾಣ ಹಾಗೂ ಲಕ್ಷ್ಮಣ ಯರಮರಸ ಬಂಧಿತ ಆರೋಪಿಗಳು. ಇವರು ಬೈಕ್‌ನಲ್ಲಿ ಸುಮಾರು 25 ಲೀಟರ್ ಸಾರಾಯಿಯನ್ನು ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅಬಕಾರಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. 2 ಬೈಕ್ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.