ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ

Lingaraj Badiger
Updated On : 13 Apr 2013, 10:57 am

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.12
ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಮುಖಂಡರ ಒಳಜಗಳದಲ್ಲೆ ಕಾಲ ಕಳೆದು ರಾಜ್ಯದ ಜನರಿಗೆ ವಂಚನೆ ಮಾಡಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹೇಳಿದರು.
ತಾಲೂಕಿನ ಅಲ್ಲೂರ (ಕೆ) ಗ್ರಾಮದಲ್ಲಿ ಜರುಗಿದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮತದಾರರು ಈ ಬಾರಿ ಬದಲಾವಣಿ ಬಯಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಮತದಾರರು ಚುನಾವಣಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ನಾಗಣಗೌಡ, ಗುಂಡು ಕುಲಕರ್ಣಿ ಸಮ್ಮುಖದಲ್ಲಿ ಬಸವರಾಜಪ್ಪ ಗೌಡ ಠಾಣಗುಂದಿ, ಮಲ್ಲಿಕಾರ್ಜುನ ಗುರೆಗೋಳ, ಸದ್ದಾಮ್ ಹುಸೇನ್ ನಾಲವಾರ, ಮೋನಪ್ಪ ಮುರಾಳ, ಕಾಶಪ್ಪ ನರಬೋಳಿ, ದೇವಪ್ಪ ಬೈಯನೋರ್, ಹಣಮಂತ ನಾಟೀಕಾರ, ಮಲ್ಲಪ್ಪ ತಳವಾರ, ಅಯ್ಯಪ್ಪ ಹಲಗಿ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಿಮಣ್ಣ ಸಾಲಿ, ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಲಿಂಗಾರೆಡ್ಡಿ ಭಾಸರೆಡ್ಡಿ, ರಾಧಾಕೃಷ್ಣ ವಾಡಿ, ಶಾಂತಪ್ಪ ಚಾಳಿಕರ್, ಜಗಣಗೌಡ ರಾಮತೀರ್ಥ, ಶರಣಗೌಡ ಭೀಮನಳ್ಳಿ, ರಂಗನಾಥ ಜಡಿ, ಮಶಾಕ ಪಟೇಲ್, ಶರಣು ಡೋಣಗಾಂವ, ಶಿವಕುಮಾರ ಸುಲ್ತಾನಪುರ, ಶಂಕರ ಚೋಕ್ಲಾ, ಅನಂದ ಮುಡಬೂಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement