ಜೆಡಿಎಸ್ ತೊರೆದು ಬಿಜೆಪಿಗೆ ಪಾಲಿಕೆ ಸದಸ್ಯರು
ಗುಲ್ಬರ್ಗ: ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪಾಲಿಕೆಯ ಸದಸ್ಯರು ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ತಮ್ಮ ನಾಯಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರೊಂದಿಗೆ ತಾವೂ ಬಿಜೆಪಿ ಸೇರುತ್ತಿರುವುದಾಗಿ ಪಾಲಿಕೆ ಸದಸ್ಯರು ಹೇಳಿದ್ದಾರೆ. ಬಸವರಾಜ ನಾಸಿ, ಶಿವು ಸೇರಿದಂತೆ 7 ಸದಸ್ಯರು ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಗುಲ್ಬರ್ಗ ದಕ್ಷಿಣ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್, ಉತ್ತರ ಅಭ್ಯರ್ಥಿ ರಾಜಗೋಪಾಲರೆಡ್ಡಿ, ಬಿಜೆಪಿ ನಾಯಕರಾದ ಕೆಬಿ ಶಾಣಪ್ಪ, ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ ಶಾಬಾದಿ, ಜಿಲ್ಲಾ ಕಾರ್ಯದರ್ಶಿ ಮುಕುಂದ ದೇಶಪಾಂಡೆ, ಪಕ್ಷದ ಅನೇಕರಿದ್ದರು.