ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟಿಕೆಟ್ ನಿರ್ಧಾರ ಬದಲಿಸಲು ಆಗ್ರಹ

Lingaraj Badiger
Updated On : 13 Apr 2013, 10:51 am

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸುರಪುರದ ಚಂದ್ರಶೇಖರ ಮಾಗನೂರಗೆ ಟಿಕೆಟ್ ನೀಡಿದ್ದು, ಪಕ್ಷದ ನಾಯಕರು ನಿರ್ಧಾರ ಬದಲಿಸಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
  ಬಿಜೆಪಿ ಕಾರ್ಯಾಲಯದಲ್ಲಿ ಮೂರು ದಿನಗಳಿಂದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಕೈಗೊಂಡಿರುವ ನಿರ್ಧಾರ ಖಂಡಿಸಿ ಧರಣಿ ನಡೆಸುತ್ತಿದ್ದಾರೆ. ಶುಕ್ರವಾರ ಕೂಡ ಕಾರ್ಯಾಲಯದಲ್ಲಿ ನೂರಾರು ಕಾರ್ಯಕರ್ತರು  ಪ್ರತಿಭಟನೆ ನಡೆಸಿ, ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ವೆಂಕಟೇಶ ಗಡ್ಡಿಮನಿ, ತಾಲೂಕಾಧ್ಯಕ್ಷ ಸಿದ್ರಾಮರೆಡ್ಡಿ ಬಲಕಲ್, ಜಿಪಂ ಸದಸ್ಯ ದೇವರಾಜ ನಾಯಕ, ಬಸವರಾಜ ಖಂಡ್ರೆ, ಬಸವರಾಜಪ್ಪ ಬಿಳ್ಹಾರ, ಶರಣಭೂಪಾಲರೆಡ್ಡಿ ಗುರಸಣಗಿ, ರಮೇಶ ಮಲಗೊಂಡ, ಗೋಪಾಲ ದಾಸನಕೇರಿ, ತಾಪಂ ಸದಸ್ಯ ಲಕ್ಷ್ಮಣ ಮನಗನಾಳ, ಲಗಮಣ್ಣ ಮುಂಡರಗಿ, ಲಿಂಗಪ್ಪ ಹತ್ತಿಮನಿ ಇತರರು, ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕ ಆಕಾಂಕ್ಷಿಗಳಿದ್ದರೂ ಕಡೆಗಣಿಸಿರುವುದು ಬೇಸರ ತಂದಿದೆ. ಆದ್ದರಿಂದ  ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement