ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಟ್ಟಣ್ಣನವರ ನೇತೃತ್ವ ಅನೇಕರು ಬಿಜೆಪಿಗೆ

Lingaraj Badiger
Updated On : 13 Apr 2013, 10:50 am

ಯಾದಗಿರಿ: ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ್ ನೇತೃತ್ವದಲ್ಲಿ ತಾಲೂಕಿನ ಕೂಡಲೂರು, ಮುನಗಾಲ, ಚಿಗಾನೂರ, ರಾಂಪುರ ಗ್ರಾಮಗಳ ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಪಕ್ಷಗಳ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಟ್ಟಣ್ಣವರ್, ಈ ಭಾಗದ ಅಭಿವೃದ್ಧಿಗೆ ನಾನು ಸದಾ ಸಿದ್ಧನಾಗಿದ್ದೇನೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನಿರುದ್ಯೋಗ ನಿವಾರಣೆಗಾಗಿ ಶ್ರಮಿಸಿದ್ದೇನೆ. ಉದ್ಯೋಗ ಮೇಳ ಮಾಡಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಈ ಭಾಗದ ಯುವಕರಿಗೆ ಸಾಕಷ್ಟು ಪ್ರೋತ್ಸಾಹ ನೀಡುವ ಕೆಲಸಗಳನ್ನು ಮಾಡಿದ್ದೇನೆ. ಇದೆಲ್ಲವನ್ನು ಮಾಡಬೇಕಾದ ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಮತಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲು ಗಮನ ನೀಡಲಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಬಾರಿ ನನ್ನನ್ನು ಬೆಂಬಲಿಸಿದರೆ ಕೆಲವೇ ತಿಂಗಳಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಳ್ಳೆಪ್ಪ ದೋತ್ರೆ ಕಿಲ್ಲನಕೇರಾ, ದೇವದಾಸ ಗುರಮಠಕಲ್, ಬಸವರಾಜ ನಾಯಕ, ರಾಜು ದೊರೆ, ಹಣ್ಮಂತ ವಡವಟ್, ಸೂಗಪ್ಪ ನೀಲಹಳ್ಳಿ, ನಾಗರೆಡ್ಡಿ ಬೆಳಗುಂದಿ, ಬಸವರಾಜ ಹಿರನೂರ, ವಿಜಯಕುಮಾರ, ಭಾಸ್ಕರ ಬೆಳಗುಂದಿ ಇತತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement