ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೀಕ್ಷಕರ ವಿವರ

Lingaraj Badiger
Updated On : 13 Apr 2013, 10:57 am

ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭೆಗಳಿಗೆ ಮೇ.5 ರಂದು ಜರುಗುವ ಚುನಾವಣೆಗಾಗಿ 6 ಜನ ಅಧಿಕಾರಿಗಳನ್ನು ಖರ್ಚು ವೆಚ್ಚ ವೀಕ್ಷಕರನ್ನಾಗಿ ನೇಮಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.  ಈ ವೀಕ್ಷಕರು ತಮಗೆ ನೀಡಿದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಏಪ್ರಿಲ್ 10ರಿಂದ ಮೇ 5ರವರೆಗೆ ಮತ್ತು ಜೂನ್ 7 ರಿಂದ 14ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ನೇಮಕಗೊಂಡ ವೀಕ್ಷಕರ ಹೆಸರು, ವಿಧಾನಸಭಾ ಕ್ಷೇತ್ರದ ವಿವರ ಇಂತಿದೆ. ಅಮೀತ್ ಬೋಬಡೆ ಐಆರ್‌ಎಸ್(ಮಹಾರಾಷ್ಟ್ರ) ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಯಾದಗಿರಿ ಮತ್ತು ಗುರುಮಿಟಕಲ್ ವಿಧಾನಸಭಾ ಕ್ಷೇತ್ರಗಳು. ಸಂದೀಪ ಗರ್ಗ ಐ.ಆರ್.ಎಸ್. (ದೆಹಲಿ)- ಗುಲ್ಬರ್ಗ ಉತ್ತರ. ಶೈಲೇಂದ್ರ ಶರ್ಮಾ ಐಆರ್‌ಎಸ್ (ರಾಜಸ್ಥಾನ)- ಜೇವರ್ಗಿ. ರಂಜೀತಕುಮಾರ ಐ.ಸಿ. ಆಂಡ್ ಸಿಇಎಸ್(ದೆಹಲಿ)- ಚಿಂಚೋಳಿ ಮತ್ತು ಗುಲ್ಬರ್ಗ ಗ್ರಾಮೀಣ. ಪಿ.ಕೆ. ಕಟಿಯಾರ್ ಐ.ಸಿ. ಆಂಡ್ ಸಿ.ಇ.ಎಸ್.(ಉತ್ತರಪ್ರದೇಶ)- ಅಫಜಲ್ಪುರ ಮತ್ತು ಚಿತ್ತಾಪುರ. ಎಸ್.ಕೆ. ಚೌಧರಿ ಐಡಿಎಎಸ್ (ಉತ್ತರ ಪ್ರದೇಶ)-ಗುಲ್ಬರ್ಗ ದಕ್ಷಿಣ ಮತ್ತು ಆಳಂದ.
ರಸ್ತೆ ಕಳಪೆ; ಆರೋಪ
ಗುಲ್ಬರ್ಗ: ಕುಂದಗೋಳದಿಂದ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂದು ರಟಕಲ್ ತಾಪಂ ಸದಸ್ಯೆ ಸುಧಾ ರಾಜಶೇಖರ ಗುಡದಾ ಹೇಳಿದರು.ರಸ್ತೆಗೆ ಬಳಸುತ್ತಿರುವ ಮಣ್ಣು ಬಿಟ್ಟರೆ ಮತ್ತೇನು ಬಳಸುತ್ತಿಲ್ಲ.. ಇಂತಹ ರಸ್ತೆಯ ನಿರ್ಮಾಣ ಕಾಮಗಾರಿಗೆ ಅಧಿಕಾರಿಗಳ ಹಾಗೂ ಶಾಸಕರು ಕೈವಾಡದಿಂದ ಈ ದುಸ್ಥಿತಿಗೆ ತಲುಪಿದೆ. ಇದನ್ನು ವಿರೋಧಿಸಲು ಹೋಗಿದ್ದ ಮಂಜುನಾಥ ಪಾಟೀಲ್ ಕುಂದಗೋಳ ಅವರಿಗೆ ಅಧಿಕಾರಿಗಳು ಹಾಗೂ ಶಾಸಕರಿಂದ ಒತ್ತಡ ತರುತ್ತಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಕಾಮಗಾರಿ ನಿಲ್ಲಿಸಿ, ಒಳ್ಳೆಯ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಒಂದು ವೇಳೆ ಕಾಮಗಾರಿಯು ಕಳಪೆ ಮಟ್ಟದಲ್ಲಿ ಮುಂದುವರೆದರೆ ಕುಂದಗೋಳ ಕ್ರಾಸ್‌ಗೆ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಂಜುನಾಥ ಪಾಟೀಲ್ ಕುಂದಗೋಳ, ಜಗದೀಶ ಬಿ. ಮಾಳಗಿ ಎಚ್ಚರಿಸಿದ್ದಾರೆ. ಮಾಹಾಗಾಂವ್‌ದಿಂದ ಸುಲೇಪೇಟ್ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಕ್ರೀಡೆಗೆ ಚಾಲನೆ
ಗುಲ್ಬರ್ಗ: ಡಾ. ಬಿ.ಆರ್. ಅಂಬೇಡ್ಕರ್ 122ನೇ ಜಯಂತಿ ನಿಮಿತ್ತ ಇತ್ತೀಚೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಅನೇಕ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಎ. ದಯಾನಂದ, ಸಿಂಡಿಕೇಟ್ ಸದಸ್ಯ ಎಸ್.ಜಿ. ಭಾರತಿ, ಪ್ರೊ. ಎಂ.ಎಸ್. ಪಾಸೋಡಿ, ಸಂಶೋಧನಾ ವಿದ್ಯಾರ್ಥಿ ಅಶೋಕ ಬಬಲಾದ, ಅರುಣ ಕುರ್ಣೆ, ಚಿದಾನಂದ ಸಿಂಧ್ಯಾ, ಅನೀಲ್ ಟೆಂಗಳಿ, ಕಾರ್ಯಕ್ರಮ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments