ಶ್ರೇಯೋಭಿವೃದ್ಧಿಗೆ ಬಿಎಸ್ಸಾರ್ ಬೆಂಬಲಿಸಿ
ಯಾದಗಿರಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾಗೂ ಆ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮುಖಂಡರಾದ ಲಲಿತಾ ಅನಪುರ ಮನವಿ ಮಾಡಿದರು.
ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಬಿಎಸ್ಸಾರ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯಾದಗಿರಿ ಮತಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ರಸ್ತೆಗಳು ತೀರಾ ಹದಗೆಟ್ಟಿವೆ, ಕುಡಿಯುವ ನೀರಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಇಷ್ಟೆಲ್ಲಾ ಆಗಿದ್ದರೂ, ಶಾಸಕರು ಇತ್ತ ಕಣ್ಣು ಹಾಯಿಸದೇ ಕೇವಲ ಚುನಾವಣೆ ದೃಷ್ಟಿಯಿಂದ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಲಗೇರಾ ಗ್ರಾಮದ ಅಯ್ಯಣ್ಣ ಹೈಯ್ಯಾಳ, ಮರಿಲಿಂಗಪ್ಪ ಬೆಂಡೆಬೆಂಬಳಿ, ಶರಣು ಬೋನೆ, ಅಯ್ಯಣ್ಣ ಜೇರಬಂಡಿ, ಸಿದ್ದಪ್ಪ ನಾಟೇಕಾರ, ಮಾರ್ಥಂಡ, ಇಮಾಮ್ ಸಾಬ್ ಚೌದ್ರಿ, ಭೀರಪ್ಪ ಯಡ್ಡಳ್ಳಿ, ರಾಮಣ್ಣ ಗಡ್ಡೆಸೂರು, ದೇವರಾಜ ಗೋವಿಂದ, ಯಲ್ಲಪ್ಪ ಬಾಗಲಕೋಟ್, ಬಸವರಾಜ ಹಣಮಂತ, ಶರಣಪ್ಪ, ಮರೆಪ್ಪ ಸೇರಿದಂತೆ ಅನೇಕರು ಬಿಎಸ್ಆರ್ ಸೇರ್ಪಡೆಯಾದರು.