9 ನಾಮಪತ್ರ ಸಲ್ಲಿಕೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ.5ರಂದು ನಡೆಯುವ ಚುನಾವಣೆಗಾಗಿ ಏ.13ರಂದು ಒಟ್ಟು 9 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಈವರೆಗೆ ಒಟ್ಟು 12 ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಶನಿವಾರ ಅಫಜಲ್ಪುರ, ಚಿತ್ತಾಪುರ(ಎಸ್‌ಸಿ), ಗುಲ್ಬರ್ಗ(ಉತ್ತರ), ಚಿಂಚೋಳಿ(ಎಸ್‌ಸಿ) ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳ ಸ್ವೀಕೃತವಾಗಿಲ್ಲ. ಉಳಿದ ಜೇವರ್ಗಿ, ಸೇಡಂ, ಗುಲ್ಬರ್ಗ ಗ್ರಾಮೀಣ(ಎಸ್‌ಸಿ) ಮೀಸಲು ಮತ್ತು ಗುಲ್ಬರ್ಗ ದಕ್ಷಿಣ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಮತ್ತು ಪಕ್ಷದ ಹೆಸರು ಇಂತಿದೆ.
ಜೇವರ್ಗಿ- ಕೌಸರ್ ಬೇಗಂ- ಪಕ್ಷೇತರ, ಸೈಯ್ಯದ್ ಪಟೇಲ್ - ಪಕ್ಷೇತರ, ವಕೀಲ್ ಪಟೇಲ್ ಸೇಡಂ- ಮಹ್ಮದ್ ಅಲಿ - ಪಕ್ಷೇತರ, ಮೋನಪ್ಪ - ಪಕ್ಷೇತರ. ಗುಲ್ಬರ್ಗ ಗ್ರಾಮೀಣ(ಎಸ್‌ಸಿ ಮೀಸಲು)- ರೇವಣಸಿದ್ದಪ್ಪ ತಂದೆ ಬಸಣ್ಣ ದೊಡ್ಮನಿ- ಪಕ್ಷೇತರ, ನಿಂಗಣ್ಣ ಸಾಯಬಣ್ಣ- ಎಸ್‌ಯುಸಿಐ(ಸಿ). ಗುಲ್ಬರ್ಗ ದಕ್ಷಿಣ- ನಾಗಮ್ಮ ಗಂಡ ಎಚ್.ವಿ. ದಿವಾಕರ್- ಪಕ್ಷೇತರ, ಸಂದೀಪ ಪಾಟೀಲ್ ತಂದೆ ಶಿವಪುತ್ರಪ್ಪ- ಪಕ್ಷೇತರ.