ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಗರೀಬಿ ಹಠಾವೋ' ಕೈ ಶಾಸಕ, ಸಚಿವರಿಗಾಗಿ ಮಾತ್ರ

Vishwanath S
Updated On : 14 Apr 2013, 12:48 pm

ಗುಲ್ಬರ್ಗ/ಶಹಾಬಾದ್: ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ತನ್ನ ಪಂಚವಾರ್ಷಿಕ ಯೋಜನೆಯಲ್ಲಿ ಘೋಷಿಸಿದ್ದ 'ಗರೀಬಿ ಹಠಾವೋ' ಘೋಷಣೆ ಮತ ನೀಡಿದ ಜನರಿಗೆ ಆಗದೆ ಅದು ಕೇವಲ ಕಾಂಗ್ರೆಸ್ ಶಾಸಕ, ಸಚಿವರಿಗಾಗಿ ಘೋಷಣೆಯಾಗಿದೆ ಎಂದು ಚಿತ್ರನಟಿ ಶ್ರುತಿ ಆರೋಪಿಸಿದರು.
ಅವರು ಶನಿವಾರ ವಾಡಿ ಪಟ್ಟಣದ ಎಸಿಸಿ ಸುರಕ್ಷಾ ಕ್ಯಾಂಟಿನ್ ಮೈದಾನದಲ್ಲಿ ಕೆಜೆಪಿ ಅಭ್ಯರ್ಥಿ ಸಿ. ಗುರುನಾಥ ಪರ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಣ್ಣು ಶಿಶು ಕುಟುಂಬಕ್ಕೆ ಭಾರ ಎನ್ನುವ ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಜಾರಿಗೆ ತಂದಿದ್ದರಿಂದ ಲಕ್ಷಗಟ್ಟಲೇ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ಕೆಜೆಪಿ ಅಭ್ಯರ್ಥಿ ಸಿ. ಗುರುನಾಥ ಮಾತನಾಡಿ, ಈ ಹಿಂದೆ ಎಸಿಸಿ ಶಹಾಬಾದ್ ಘಟಕದಲ್ಲಿ ಸಾವಿರಾರು ಕಾರ್ಮಿಕರ ಸೇರ್ಪಡೆಗಾಗಿ ಪೊಲೀಸರ ಗುಂಡೇಟು ತಿಂದು ಹೆದರದೆ ಹೋರಾಟ ಮಾಡಿದ್ದೇನೆ. ಕಳೆದ ಹಲವು ವರ್ಷಗಳಿಂದ ಜನಸಾಮಾನ್ಯರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ನಡೆಸಿದ್ದೇನೆ ಎಂದರು.  ಕೆಜೆಪಿ ಯುವ ಕಾರ್ಯದರ್ಶಿ ಜಗದೀಶ, ಸೇಮಸನ್ ಇಸಾಯಿ, ದೇವಿಂದ್ರ ಕರದಳ್ಳಿ, ಶಿವುಕುಮಾರ ಇಂಗಿನಶೆಟ್ಟಿ, ತಾಲೂಕು ಯುವ ಘಟಕ ಅಧ್ಯಕ್ಷ ಬಸವಂತರಾವ ಪಾಟೀಲ್ ಇದ್ದರು.
ಪ್ರಚಾರ ವಾಹನ ತಡೆ: ವಾಡಿ ಪಟ್ಟಣದಲ್ಲಿ ಕೆಜೆಪಿ ಪರವಾಗಿ ಚಿತ್ರನಟಿ ಶ್ರುತಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಟಂಟಂ ಮೂಲಕ ಪ್ರಚಾರ ನಡೆಸುತ್ತಿದ್ದಾಗ  ಪರವಾನಗಿ ಇಲ್ಲವೆಂದು ಟಂಟಂ ಅನ್ನು ಎರಡು ಗಂಟೆ ಕಾಲ ತಡೆದು ನಿಲ್ಲಿಸಿದ ಘಟನೆ ಶನಿವಾರ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement