ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಎಸ್‌ಪಿಯಿಂದ ಶಿವಲಿಂಗಪ್ಪ ಕಿನ್ನೂರ

Vishwanath S
Updated On : 14 Apr 2013, 12:49 pm

ಜೇವರ್ಗಿ: ಬಹುಜನ ಸಮಾಜ ಪಕ್ಷದ ಹಿರಿಯ ಜಿಲ್ಲಾ ಮುಖಂಡ ಶಿವಲಿಂಗಪ್ಪ ಕಿನ್ನೂರ ಅವರು ಜೇವರ್ಗಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ನೇತೃತ್ವದಲ್ಲಿ ಕಳೆದ ಅನೇಕ ವರ್ಷಗಳಿಂದ ಜನಪರ, ರೈತಪರ ಹೋರಾಟ ನಡೆಸುವುದರೊಂದಿಗೆ ಬಹುಜನ ಸಮಾಜ ಪಕ್ಷ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಪರಾಭವವಾಗಿತ್ತು. ಆ ನಿಟ್ಟಿನಲ್ಲಿ ಜನರ ಅನುಕಂಪ ತಮ್ಮ ಮೇಲೆ ಇದೆ. ರಾಜ್ಯ ನಾಯಕರು ಕೂಡ ತಮ್ಮ ಮೇಲೆ ವಿಶ್ವಾಸವಿಟ್ಟು ಟಿಕೆಟ್ ಕೊಡುವುದಾಗಿ ತಿಳಿಸಿದ್ದಾರೆ. ತಮ್ಮ ಪಕ್ಷ ಸ್ಪರ್ಧೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಯ್ಯಪ್ಪ ಸಿಂದಗಿ, ಬಸವರಾಜ, ಮಲ್ಲಪ್ಪ ಕುರನಳ್ಳಿ, ಬಾಬು ಅವರಾದ, ಹಲಕಂಟೇಪ್ಪ ತಳವಾರ, ಮಹಾಂತ ದೊಡ್ಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement