ಬಿಜೆಪಿಗೆ ಸಾಮೂಹಿಕ ರಾಜಿನಾಮೆ
ಗುಲ್ಬರ್ಗ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜಿನಾಮೆ ಸೇಡಂ ತಾಲೂಕಿನ ಬಿಜೆಪಿ ಅಧ್ಯಕ್ಷರಿಗೆ ಸಲ್ಲಿದ್ದಾರೆ.
ಪರ್ವತರೆಡ್ಡಿ ಪಾಟೀಲ್ ನಾಮವಾರ, ಲಕ್ಷ್ಮಣ ಶಿವಪ್ಪ ಮಂತ್ರಿ ಕೋಡ್ಲಾ, ಪಾಪಮ್ಮ ಅನಂತರೆಡ್ಡಿ ಮುಷ್ಟಳ್ಳಿ, ಶಿವಶಾಂತಮ್ಮ ಸಾಬಣ್ಣ ಭಜಿ ಮುಷ್ಟಳ್ಳಿ, ಶಾಖಿಕಾ ಬೇಗಂ ಶಮಶೊದ್ದೀನ್ ಕೋಡ್ಲಾ, ಭಾರತಮ್ಮ ಮಲ್ಲಪ್ಪ ಮುಷ್ಟಳ್ಳಿ, ಹಣಮಂತ ರೇವಪ್ಪ ನೇರಳೆ ಕೋಡ್ಲಾ, ಚಂದ್ರಪ್ಪ ಕಾಶಪ್ಪ ನೆಂಟೆ, ಬಸರೆಡ್ಡಿ ಅನಂತರೆಡ್ಡಿ ದೇಸಾಯಿ ರಾಜಿನಾಮೆ ಸಲ್ಲಿಸಿದ್ದಾರೆ.