ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನೆಗೊಬ್ಬರಿಗೆ ಉದ್ಯೋಗ ಕಲ್ಪಿಸಲು ಕ್ರಮ: ಗಿರೀಶ್

Vishwanath S
Updated On : 14 Apr 2013, 12:44 pm

ಗುರುಮಠಕಲ್: ಮತಕ್ಷೇತ್ರವು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮಂದಿ ಗುಳೆ ಹೋಗುವವರ ಸಂಖ್ಯೆ ಇಲ್ಲಿದೆ. ಅದನ್ನು ನಿಯಂತ್ರಿಸಿ, ಮತಕ್ಷೇತ್ರದ ಪ್ರತಿ ಮನೆಗೊಬ್ಬರಿಗೆ ಉದ್ಯೋಗ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟೆಣ್ಣವರ್ ಹೇಳಿದರು.
  ಯಾದಗಿರಿ ತಾಲೂಕಿನ ಯಲಸತ್ತಿ ಗ್ರಾಮದಲ್ಲಿ 'ನಮ್ಮ ಗುರುಮಠಕಲ್, ನಮ್ಮ ಬಿಜೆಪಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮತ ಯಾಚಿಸಿದರು.
  ಗುರುಮಠಕಲ್ ಮತಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು. ಮತದಾರರು ಜಾಗೃತರಾಗಿ ತಮಗೆ ಬೇಕಾದ ಉತ್ತಮ ಶಾಸಕರನ್ನು ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ, ಆರ್ಥಿಕ ಏಳ್ಗೆಗೆ, ಯುವಕರಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.
  ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರಾದ ರಾಕೇಶ, ರಾಹುಲ ಮಡಿವಾಳ, ನಂದಕಿಶೋರ, ಕಾಳಪ್ಪ ವಿಶ್ವಕರ್ಮ, ಹರಿಪ್ರಸಾದ್ ರೆಡ್ಡಿ, ಡಾ.ಸುದರ್ಶನ್, ಶ್ರೀನಿವಾಸ್ ಎ., ಭೀಮಸೇನ ಕುಲಕರ್ಣಿ, ಚಿಂತನಪಲ್ಲಿ ಶರಣಪ್ಪ, ಶೇಖರ್ ಕಲಾಲ್, ಶಂಕರ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಗಿರೀಶ ಮಟ್ಟೆಣ್ಣವರ್ ಪಕ್ಷಕ್ಕೆ ಬರಮಾಡಿಕೊಂಡರು.
ಯಲ್ಹೇರಿಯಲ್ಲಿ ಪ್ರಚಾರ: 5 ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಕಾರ್ಯಕ್ರಮಗಳು ಹಾಗೂ ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಸಹಕಾರಿಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟೆಣ್ಣವರ್ ಹೇಳಿದರು.  
  ಕ್ಷೇತ್ರದ ಯಲ್ಹೇರಿ ಗ್ರಾಮದಲ್ಲಿ ಹಮ್ಮಿಕೊಂಡ ಚುನಾವಣ ಪ್ರಚಾರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ, ಹಾಲಿ ಶಾಸಕ ಚಿಂಚನಸೂರ್, ಕ್ಷೇತ್ರದ ಸಮಸ್ಯೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಜನಪ್ರತಿನಿಧಿಯಾಗಿ ಮಾಡಬೇಕಾದ ಕರ್ತವ್ಯವನ್ನು ಮರೆತು ಬರೀ ಭ್ರಷ್ಟಾಚಾರದಲ್ಲಿಯೇ ಕಾಲಹರಣ ಮಾಡಿದ್ದಾರೆ. ಕಳಪೆ ಕಾಮಗಾರಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿ ರಾಜಕರಣ ಮತ್ತು ಒಡೆದು ಆಳುವುದೇ ಹಾಲಿ ಶಾಸಕರ ಸಾಧನೆಯಾಗಿದೆ ಎಂದು ಹರಿಹಾಯ್ದರು.
  ಹಣ, ಹೆಂಡದಿಂದ ಎಲ್ಲರನ್ನೂ ಖರೀದಿಸಬಲ್ಲೆ ಎಂದು ತಿಳಿದಿರುವ ಶಾಸಕರಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಬಿಎಸ್‌ಆರ್ ಮುಖಂಡ ಬಸವರಾಜಪ್ಪ ಗೌಡ ಶಿವರಾಯ ನೇತೃತ್ವದಲ್ಲಿ ಅವರ ಅಪಾರ ಬೆಂಬಲಿಗರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು. ಗ್ರಾಪಂ ಅಧ್ಯಕ್ಷ ಭದ್ರಪ್ಪ ಬಾಗಿಲಿ, ಗ್ರಾಪಂ ಸದಸ್ಯರಾದ ಸಿದ್ದಪ್ಪ ಬೊವಿ, ಶರಣಪ್ಪ ಅಮಾತೆಪ್ಪನೋರ್, ಕಾಶಪ್ಪ ಮಡಿವಾಳ್, ಸಂಜು ನಾಯಕ್ ಗಿಡ್ಡನದ್ದಿತಾಂಡಾ ಇತರರು ಬಿಜೆಪಿ ಸೇರ್ಪಡೆಯಾದರು. ಮಾಳಪ್ಪ ಪೂಜಾರಿ, ಮೋಹನಗೌಡ ಪೊಲೀಸ ಪಾಟೀಲ್, ಜಯಪ್ಪ ಗೌಡ, ಸಾಯಬಣ್ಣ ಗಣಪುರ, ಲಿಂಗಪ್ಪ ಗಣಪುರ, ಶರಣು ಕೊಳೂರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement