ಸಾರಾಯಿ ಸಾಗಣೆಗಾರರ ಬಂಧನ
ಗುಲ್ಬರ್ಗ: ವಿಧಾನಸಭೆ ಚುನಾವಣೆ ಪ್ರಯುಕ್ತ ಮತದಾರರಿಗೆ ಹಂಚಲು ಅಕ್ರಮವಾಗಿ ಸಾರಾಯಿ ಸಾಗಣೆ ಮಾಡುತ್ತಿದ್ದ ಟಾಟಾ ಇಂಡಿಕಾ ಕಾರ್ ಜಪ್ತಿ ಮಾಡಿರುವ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.
ಸ್ಟೇಷನ್ ಗಾಣಗಾಪುರದ ಕಾರ್ ಚಾಲಕ ಹನುಮಾನ ಸಿಂಗ್ ತಂದೆ ನರಸಿಂಗ್ ಠಾಕೂರ ಮತ್ತು ಮಹ್ಮದ್ ಶರೀಫ್ ತಂದೆ ಅಬ್ದುಲ್ ಖದೀರ್ ಶೇಖ್ ಎಂಬುವರು ಬಂಧಿತರು.
ಇಬ್ಬರು ಸೇರಿಕೊಂಡು ಮಹಾರಾಷ್ಟ್ರ ರಾಜ್ಯದ ಖಸಗಿ ಗ್ರಾಮದಿಂದ ಸ್ಟೇಷನ್ ಗಾಣಗಾಪುರ ಗ್ರಾಮಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದರು. ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಖಜೂರಿ ಚೆಕ್ಪೋಸ್ಟ್ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 20 ಲೀಟರ್ ಸಾರಾಯಿ ಬಾಟಲಿಗಳು, 300 ನಗದು, ಕಾರ್ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.