ಬಿಜೆಪಿಗೆ ಸೇರ್ಪಡೆ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ಅಲ್ಲೂರ(ಬಿ) ಗ್ರಾಮದ ಕಾಂಗ್ರೆಸ್, ಜೆಡಿಎಸ್ ತೊರೆದ ವಿವಿಧ ಮುಖಂಡರು ಶಾಸಕ ವಾಲ್ಮೀಕಿ ನಾಯಕ, ಶಂಕರ ವಕೀಲ ನೇತೃತ್ವದಲ್ಲಿ ಬಿಜೆಪಿ ಸೇರಿದರು. ಗ್ರಾಮದ ಮುಖಂಡರಾದ ಸಿದ್ದಣ್ಣಗೌಡ ಪಾಟೀಲ್, ಶರಣಯ್ಯ ಹಿರೇಮಠ, ಬಸಲಿಂಗಪ್ಪ ಜಮಶೆಟ್ಟಿ, ನಾಗಣ್ಣ ಸಿಂಗೋಡಿ, ಮಲ್ಲಣ್ಣ ಕುಂಬಾರ, ಇಮಾಮಸಾಬ್ ಮುಲ್ಲಾ, ಶಮಶೋದ್ದಿನ್ ಮೋಟ್ನಳ್ಳಿ, ಸಾತಪ್ಪ ನಾಟೀಕಾರ, ಕೊಂಬಾ, ಮಲ್ಲಪ್ಪ ಬೇಳಿ, ಬಸವರಾಜ ಎಂ. ಭೀಮರಾಯ ಹಂದರ್ಕಿ, ಹುಸನಪ್ಪ ಹಂದರ್ಕಿ, ದುರ್ಗಪ್ಪ ಮುಗಲಾ, ಮೋನಪ್ಪ ಶೆಬಲ್, ವೆಂಕಟೇಶ ಹೊಸಕೋಟೆ, ಮಹಾಂತೇಶ ಗುಂಡಬೊ, ಮಲ್ಲಪ್ಪ ವಾಡ, ಮಲ್ಲಪ್ಪ, ಶರಣಗೌಡ ಬಿಜೆಪಿಗೆ ಸೇರ್ಪಡೆಯಾದರು.
ಜಿಲ್ಲಾಧಿಕಾರಿ ಸೂಚನೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತದಾನ ಮೇ.5ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಮತದಾನಕ್ಕಾಗಿ ನಿಯೋಜಿತ ಸಿಬ್ಬಂದಿಯನ್ನು ಅವಶ್ಯ ಮತದಾನದ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ಸಾಗಿಸಲು 213 ಬಸ್, 92 ಮ್ಯಾಕ್ಸಿಕ್ಯಾಬ್, 307 ಕ್ರೂಸರ್, 357 ಜೀಪ್ಗಳ ಅವಶ್ಯಕವಿರುತ್ತದೆ. ಇದಕ್ಕಾಗಿ ಬೇಕಾಗುವ ಅಗತ್ಯವಿರುವ ಬಸ್ ಮತ್ತು ಇತರ ವಾಹನಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಶಕ್ಕೆ ಒಪ್ಪಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.
ಇಂದು ಜಯಂತ್ಯುತ್ಸವ
ಗುಲ್ಬರ್ಗ: 11ನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ನಿಮಿತ್ತ ಏ.15 ರಂದು ನಗರದ ಮಕ್ಕಂಪುರ, ಜೇಡರ ಓಣಿಯಲ್ಲಿರುವ ದೇವರ ದಾಸಿಮಯ್ಯ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ದೇವರ ದಾಸಿಮಯ್ಯನವರ ಲಿಂಗಪೀಠ ಹಾಗೂ ಅಮೃತ ಶೀಲಾಮೂರ್ತಿಗೆ ಪೂಜೆ ಅಭಿಷೇಕ ನಡೆಯುವುದು. ನಂತರ ತೊಟ್ಟಿಲು ಕಾರ್ಯಕ್ರಮ, ಮಹಾಪ್ರಸಾದ, ಪೂಜೆ, ಅಭಿಷೇಕ ಹಾಗೂ ವಚನ ಪಠಣ ನಡೆಯುವುದು ಎಂದು ದೇವರ ದಾಸಿಮಯ್ಯ ದೇವಾಲಯದ ಸದ್ಭಕ್ತ ಮಂಡಳಿ ತಿಳಿಸಿದೆ.
19ರವರೆಗೆ ಉಪನ್ಯಾಸ
ಗುಲ್ಬರ್ಗ: ನಗರದ ಬಿದ್ದಾಪುರ ಕಾಲೋನಿಯ ರಾಯರ ಮಠದಲ್ಲಿ ರಾಮನವಮಿ ಉತ್ಸವದ ಅಂಗವಾಗಿ ಏ.14ರಿಂದ 19ರವರೆಗೆ ಪ್ರತಿದಿನ ಬೆಳಗ್ಗೆ 8 ರಿಂದ 9ರವರೆಗೆ ಹರಿಕಥಾಮೃತಸಾರ ಹಾಗೂ ಸಂಜೆ 5.30 ರಿಂದ 6.30ರವರೆಗೆ ವಾಲ್ಮೀಕಿ ರಾಮಾಯಣ ಮೂಲ ರಾಮಾಯಣದವರೆಗೆ ಕುರಿತು ಉಪನ್ಯಾಸ ನಡೆಯಲಿದೆ. ಬೆಂಗಳೂರಿನ ಪಂಡಿತ ಮುರಲೀಧರ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ. ಪ್ರತಿದಿನ ಗುರುರಾಯರ ವೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಶೇಷ, ಅಲಂಕಾರ ಸೇವೆ ನಡೆಯುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ನವಲಿ ಕೃಷ್ಣಾಚಾರ್ಯ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
24ರಂದು ಮತದಾನ
ಗುಲ್ಬರ್ಗ: ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಗುಲ್ಬರ್ಗ ಸಂಚಾರಿ ಪೀಠದ ಘಟಕಗಳ ಪದಾಧಿಕಾರಿಗಳ ಚುನಾವಣೆ ಏ.24ರಂದು ನಡೆಯಲಿದೆ. ಈಗಾಗಲೇ ಸ್ಪರ್ಧಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ