ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತ ಎಣಿಕೆಗೆ ಸಿದ್ಧತೆ

Lingaraj Badiger
Updated On : 15 Apr 2013, 11:25 am

ಕನ್ನಡಪ್ರಭ ವಾರ್ತೆ, ಬೀದರ್, ಏ.14
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮೇ 8ರಂದು ನಡೆಯಲಿರುವ ನಗರದ ಬಿವಿಬಿ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಪಿಸಿ ಜಾಫರ್ ತಿಳಿಸಿದರು.
  ಏ.8ರಂದು ಬಸವಕಲ್ಯಾಣ, ಹುಮನಾಬಾದ್, ಬೀದರ್ ದಕ್ಷಿಣ, ಬೀದರ್, ಭಾಲ್ಕಿ ಹಾಗೂ ಔರಾದ್ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಬೀದರ್ನ ಬಿ.ವಿ. ಭೂಮರೆಡ್ಡಿ ಕಾಲೇಜು ಕಟ್ಟಡದಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಈ ಕಟ್ಟಡದಲ್ಲಿ ನಡೆಯಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.
 ಕಟ್ಟಡದಲ್ಲಿ ಚುನಾವಣಾ ವೀಕ್ಷಕರಿಗೆ, ಕಂಟ್ರೋಲ್ ರೂಂ, ಮಾಧ್ಯಮ ಪ್ರತಿನಿಧಿಗಳಿಗೆ, ಚುನಾವಣಾಧಿಕಾರಿಗಳಿಗಾಗಿ ಇಂಟರ್ ನೆಟ್ ಅಪ್ ಲೋಡ್ ಮಾಡುವ ವ್ಯವಸ್ಥೆಗಳಿಗೆ (ಕಂಪ್ಯೂಟರ್ ಲ್ಯಾಬ್) ಭದ್ರತಾ ಕೊಠಡಿ ಮತ್ತಿತರಗಾಗಿ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಗಿದೆ.
  ಮತಗಳ ಎಣಿಕೆ ನಡೆವ ಕಟ್ಟಡವನ್ನು ಭಾನುವಾರ ಜಿಲ್ಲಾಧಿಕಾರಿ ಡಾ. ಪಿಸಿ ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿದ ಸುನೀಲ್ ಪನವಾರ, ಸಹಾಯಕ ಆಯುಕ್ತರಾದ ಕನಗವಲ್ಲಿ ಪರಿಶೀಲಿಸಿದರು.
  ಮತ ಎಣಿಕೆ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಆರೋಗ್ಯ ಸೇವೆ, ಸುವ್ಯವಸ್ಥಿತ ಶೌಚಾಲಯ ಹಾಗೂ ಭದ್ರತೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement