ಮಲ್ಲೇಶಿ ಪಾಟೀಲ್ ಬಿಜೆಪಿ ತಾಲೂಕಾಧ್ಯಕ್ಷ
ಸುರಪುರ: ಬಿಜೆಪಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಲ್ಲೇಶಿ ಪಾಟೀಲ್ ನಾಗರಾಳ ಭಾನುವಾರ ನೇಮಕಗೊಂಡರು. ಬಿಜೆಪಿ ಕಚೇರಿಯಲ್ಲಿ ಎಚ್ಕೆಡಿಬಿ ಅಧ್ಯಕ್ಷ ಮಹಾಂತಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ ರಘುನಾಥ ಮಲ್ಕಾಪುರೆ, ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ ಸೂಚನೆ ಮೇರೆಗೆ ಮಲ್ಲೇಶಿ ಪಾಟೀಲ್ರ ಹೆಸರನ್ನು ಘೋಷಿಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೇಣುಗೋಪಾಲ ಜೇವರ್ಗಿ, ರಮೇಶ ಶೆಟ್ಟಿ, ಸೋಮಣ್ಣ, ಬಸವರಾಜ, ಭೀಮರಾಯ, ಮಲ್ಲಣ್ಣ, ಮಲ್ಹಾರಾವ ಕುಲಕರ್ಣಿ, ದೇವೇಂದ್ರ ಹಿರೇಮಠ, ಚಂದ್ರಕಾಂತ, ಬಸವರಾಜ ಬಿಲಾಕಲ್, ರಂಗಂಪ್ಪನಾಯಕ, ಮಾಪಯ್ಯಸ್ವಾಮಿ, ಮಲ್ಲಿಕಾರ್ಜುನ ಇದ್ದರು.
--