ರಾಜುಗೌಡ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ
ಸುರಪುರ: ಪಟ್ಟಣದ ಖುರೇಶಿ ಮೊಹಲ್ಲಾ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ರಾಜುಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು.
ಮಹ್ಮದ ಮೌಲಾ ಸೌದಗಾರ, ಅಬ್ದುಲ್ ಲತೀಫ್ ಸಾಬ್, ಅಬ್ದುಲ್ ಮಜೀದ್, ಮಹ್ಮದ ರಫೀಕ್, ಮಹ್ಮದ ಸೀಪಾತ್, ಗೌಸು ಖುರೇಶಿ, ರಫೀಕ ನಾಸಿ, ಅಬ್ದುಲ್ ಸಾಲಮ್ ಇತರರು ಜೆಡಿಎಸ್ ಸೇರಿದರು.
ಕಬಾಡಗೇರಾದ ಮಹ್ಮದ ಸಾಧಿಕ್, ಅಹ್ಮದ ಸಾಬ್, ಶಾಹೀದ್ ಕಡಕೂರ್, ಬಂದೇನಾವಜ್ ಚೌದ್ರಿ, ಎಂ.ಹಸನ ಸೌದಾಗರ್, ಹುಸೇನ್ ಸೌದಾಗರ, ಜಾಕೀರ ಮೇಸ್ತ್ರಿ, ಜಾಫರ್ ಸಾಬ್ ಕೊಂಗಂಡಿ, ಹುಸ್ಮಾನ ಖಾನ್ ಇತರರು ರಾಜುಗೌಡರ ಮೇಲೆ ವಿಶ್ವಾಸವಿಟ್ಟು ಜೆಡಿಎಸ್ ಸೇರ್ಪಡೆಯಾದರು.
ಕಟ್ಟಡ ಕಾರ್ಮಿಕ ಗೌಂಡಿ ಸಂಘದ ಹಣಮಂತ ದೇವತ್ಕಲ್, ಪಿಡ್ಡಪ್ಪ ವಗ್ಗಾ, ಯಂಕಪ್ಪ ಬುಡಬೋವಿಗಲ್ಲಿ, ಮಾನಪ್ಪ ದೇಸಾಯಿ, ಹುಲಗಪ್ಪ ದೇಸಾಯಿ, ಮರೆಪ್ಪ ಗುಡ್ಡಕಾಯಿ, ರಂಗಪ್ಪ ಕವಲಿ, ಉತ್ತಪ್ಪ, ಮುತ್ತಪ್ಪ ಕುರುಬರಗಲ್ಲಿ, ಭೀಮಣ್ಣ ಡೊಣ್ಣಿಗೇರಿ, ಹಣಮತ ಕೆಂಗೂರಿ, ಭೀಮಣ್ಣಗೌಡ ಪೊಲೀಸ್ ಪಾಟೀಲ್ ಅವರನ್ನು ರಾಜುಗೌಡ ಪಕ್ಷಕ್ಕೆ ಬರಮಾಡಿಕೊಂಡರು. ಜಾಲಿ ಬೆಂಚಿಯ ಶರಣಪ್ಪ ಕಟ್ಟಿಮನಿ, ಅಯ್ಯಪ್ಪ, ಸುಭಾಸ್, ಮಲ್ಲಪ್ಪ, ಹಣಮಂತ, ಬಸವರಾಜ, ಮಲ್ಲಿಕಾರ್ಜುನ, ಹಣಮಂತ, ಶಾಂತಪ್ಪ, ಕೆಂಚಪ್ಪ, ಪರಶುರಾಮ, ಅಂಬ್ಲಪ್ಪ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.