ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿವಪಂಚಾಕ್ಷರೇಶ್ವರರ ಪುಣ್ಯಾರಾಧನೆ 18ರಿಂದ

Lingaraj Badiger
Updated On : 15 Apr 2013, 11:21 am

 ಗುಲ್ಬರ್ಗ/ಶಹಾಬಾದ್: ಪೇಠಶಿರೂರ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠ ಸಂಸ್ಥಾನದಲ್ಲಿ ಲಿಂ. ಶಿವಪಂಚಾಕ್ಷರೇಶ್ವರರ 35ನೇ ಪಣ್ಯಾದಾಧನೆ ಹಾಗೂ ಸಿದ್ದಲಿಂಗ ಸ್ವಾಮಿಗಳ 4ನೇ ಪಟ್ಟಾಧಿಕಾರ ಮಹೋತ್ಸವ ಏ.18 ರಿಂದ 21ರವರೆಗೆ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ.
ಏ.18ರಂದು ರಾತ್ರಿ 8ಕ್ಕೆ ಪುರಾಣ ಉದ್ಘಾಟನೆ ಚಿತ್ತಾಪುರ ಹಿರಿಯ ನ್ಯಾಯಾಧೀಶರಾದ ಸಿ.ರಂಗೇಗೌಡರಿಂದ ನಡೆಯಲಿದೆ. ಸಿದ್ದಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಡಾ. ಟಿ.ಎ. ಪಾಟೀಲ್, ಉಪನ್ಯಾಸ ಡಾ. ಸೋಮಶಂಕರ ವಿಶ್ವನಾಥಮಠ, ಚಂದ್ರಶೇಖರ ಅವಂಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಿಜಾಪುರದ ಹತ್ತರಗಾ ವಿರಕ್ತ ಮಠದ ಮುರುಘೇಂದ್ರ ಸ್ವಾಮಿಗಳಿಂದ ಪುರಾಣ ನಡೆಯುವುದು.
ಏ.20ರಂದು ಪುರಾಣ ಮಂಗಲ ಸಾನ್ನಿಧ್ಯವನ್ನು ಚಿಕ್ಕಸೂಗೂರ ಚೌಕಿ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ, ರಾವೂರ ಸಿದ್ದಲಿಂಗ ಸ್ವಾಮೀಜಿ, ಗುರುಮಠಕಲನ ಶಾಂತವೀರ ಸ್ವಾಮೀಜಿ, ಗುಲ್ಬರ್ಗದ ಶಿವಾನಂದೇಶ್ವರ ಸ್ವಾಮೀಜಿ, ನಿಂಬರ್ಗಾದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಶಾಸಕಿ ಅರುಣಾ ಪಾಟೀಲ್, ಶಾಸಕ ಶರಣಪ್ರಕಾಶ ಪಾಟೀಲ್, ಅಲ್ಲಂಪ್ರಭು ಪಾಟೀಲ್, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ,   ಪ್ರಿಯಾಂಕ್ ಖರ್ಗೆ, ಅಜಯಸಿಂಗ್ ತಿವಾರಿ, ಜಿಪಂ ಸದಸ್ಯ ರಮೇಶ ಮರಗೋಳ, ನೀಲಕಂಠರಾವ ಮುಲಗಿ, ಪಾಷಾ ಪಟೇಲ್ ಉಪಸ್ಥಿತರಿರುವರು.
21ರಂದು ಮಹಾರುದ್ರಾಭಿಷೇಕ: ಏ. 21ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ, ಬೆ.10ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ, 11ಕ್ಕೆ ಮಹಾಪ್ರಸಾದ ವಿತರಣೆ, ಮ.12.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯುವುದು, ಸಂಜೆ 7ಕ್ಕೆ ನಡೆಯುವ ಧರ್ಮಸಭೆ  ಸಾನ್ನಿಧ್ಯವನ್ನು ಗುಲ್ಬರ್ಗದ ರೇವಣಸಿದ್ದ ಸ್ವಾಮಿ, ಸೊನ್ನದ ಶಿವಾನಂದ ಸ್ವಾಮಿ  ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement