5 ನಾಮಪತ್ರ ಸಲ್ಲಿಕೆ
ಚಿಂಚೋಳಿ: ಚಿಂಚೋಳಿ(ಪ.ಜಾ) ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಸೋಮವಾರ ವಿವಿಧ ಪಕ್ಷಗಳಿಂದ ಒಟ್ಟು 3 ಅಭ್ಯರ್ಥಿಗಳ 5 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಾಲೂಕು ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದರು. ಕೆಜೆಪಿ ಅಭ್ಯರ್ಥಿ ಸುನೀಲ್ ಯಮುನಪ್ಪ ವಲ್ಯಾಪುರೆ 2 ನಾಮಪತ್ರ, ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಗೋಪಾಲದೇವ ಜಾಧವ 2 ನಾಮಪತ್ರಗಳು ಮತ್ತು ಜೆಡಿಎಸ್ ಪಕ್ಷದ ಮಲ್ಲಿಕಾರ್ಜುನ ನರಸಿಂಗರಾವ ಗಾಜರೆ 1 ನಾಮಪತ್ರಗಳು ಸಲ್ಲಿಸಿದ್ದಾರೆ. ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.12ರಂದು ಶುಕ್ರವಾರ ಬಿಜೆಪಿ ಅಭ್ಯರ್ಥಿ ರಮೇಶ ಶರಣಪ್ಪ ಯಾಕಾಪುರ 2 ನಾಮಪತ್ರಗಳು ಸಲ್ಲಿಸಿದ್ದರು.