ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ: ಅಲ್ಲಂಪ್ರಭು

Lingaraj Badiger
Updated On : 16 Apr 2013, 11:04 am

ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.15
ದೀನ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ಜಾತಿ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಬದ್ಧವಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ವರ್ಗಗಳ ಜನತೆಯ ಸಹಕಾರದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಹೇಳಿದರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,  ಹೈದರಾಬಾದ್ ಕರ್ನಾಟಕ ಪ್ರದೇಶ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತಂದಿದೆ ಎಂದರು.
ಅಧಿಕಾರಕ್ಕೆ ಬಂದರೆ ಅಧಿಕ ಅನುದಾನ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 371ನೇ ಕಲಂ ಜಾರಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಅವರು ಜನಪರ, ರೈತಪರ ಧ್ವನಿಯಾಗಿ ಬಡರೋಗಿಗಳಿಗೆ ಆಶಾಕಿರಣರಾಗಿದ್ದಾರೆ. ಅಂತಲೇ ಬಿಜೆಪಿ, ಕೆಜೆಪಿ, ಜೆಡಿಎಸ್ ತೊರೆದು ಬಹುತೇಕ ಜನರು ಕಾಂಗ್ರೆಸ್ ಅಪ್ಪಿಕೊಳ್ಳುತ್ತಿದ್ದು, ಡಾ. ಅಜಯಸಿಂಗ್ ಗೆಲವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಶಾಂತಗೌಡ ದುಮ್ಮದ್ರಿ, ಬಸವಣೆಪ್ಪ ಗೌನಳ್ಳಿ, ಸಿದ್ರಾಮಪ್ಪಗೌಡ ಹರನೂರ, ಖಾಸಿಂ ಪಟೇಲ್ ಮುದಬಾಳ, ತಾಪಂ ಅಧ್ಯಕ್ಷ ಶರಣಗೌಡ ಹರನೂರ, ಕಾಶಿರಾಯಗೌಡ ಯಲಗೋಡ, ಚಂದ್ರಶೇಖರ ಪುರಾಣಿಕ, ತಿಪ್ಪಣ್ಣ ಗುಂಡಗುರ್ತಿ, ವಿಜಯಕುಮಾರ ಕಲ್ಲಹಂಗರಗಾ, ಷಣ್ಮುಖಪ್ಪ ಹಿರೇಗೌಡ, ಮಲ್ಲಣ್ಣಗೌಡ ನೆದಲಗಿ, ಅಶೋಕ ಪಾಟೀಲ್, ಸೈಯದ್ ಫಯಾಜ್ ಜಮಾದಾರ, ನೀಲಕಂಠ ಕಟ್ಟಿಸಂಗಾವಿ, ಸುಧೀಂದ್ರ ಆಲಬಾಳ, ಸಂಗಣ್ಣಗೌಡ ಗುಳ್ಯಾಳ ,ಪ್ರಕಾಶ ಹಳಿಮನಿ, ಸಲ್ಲಿಂ ಕಣ್ಣಿ, ಮಹಿಮೂದ್ ನೂರಿ, ಸುಧೀಂದ್ರ ವಕೀಲ, ರವಿ ಕೋಳಕೂರ ಇತರರು ಇದ್ದರು.
ಸೇರ್ಪಡೆ: ಇದೇ ವೇಳೆ ಬಿಜೆಪಿಯಲ್ಲಿದ್ದ ಶಿವಶರಣಪ್ಪ ಸೀರಿ, ರಾಜಶೇಖರ ಸೀರಿ, ಅಬ್ದುಲ್ ರಹೆಮಾನ್ ಪಟೇಲ್, ಲಾಲಯ್ಯ ಗುತ್ತೇದಾರ, ವಸಂತ ನರಿಬೋಳ ಮತ್ತು ಮಲ್ಲಿಕಾರ್ಜುನ ದಿನ್ನಿ, ದೇವು ಚನ್ನೂರ ಅವರು ತಮ್ಮ ಬೆಂಬಲಿಗರೊಂದಿಗೆ ಇಕ್ಬಾಲ್ ಅಹ್ಮದ್ ಸರಡಗಿ, ಅಲ್ಲಂಪ್ರಭು ಪಾಟೀಲ್, ಡಾ. ಅಜಯಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement