ಬಿಜೆಪಿ, 'ಕೈ' ತೊರೆದು ಜೆಡಿಎಸ್ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.15
ತಾಲೂಕಿನ ವಿವಿಧ ಗ್ರಾಮಗಳ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನೂರಾರು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷದ ಹಿರಿಯ ಮುಖಂಡ ಕ್ಷೇತ್ರದ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಪಕ್ಷದ ಕಚೇರಿಯಲ್ಲಿ ನೂರಾರು ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಕೇದಾರಲಿಂಗಯ್ಯ ಹಿರೇಮಠ, ರಾಜಕೀಯಕ್ಕೆ ಯುವಕರು ಬರಲೇಬೇಕು. ರಾಜಕೀಯ ಹಾಗೇ ಹೀಗೆ, ರಾಜಕಾರಣಿಗಳು ಹಾಗೇ ಹೀಗೆ ಎಂದು ಮಾತನಾಡುವುದುನ್ನು ಬಿಟ್ಟು ಯುವಕರು ರಾಜಕೀಯಕ್ಕೆ ಬರಬೇಕು. ಯಾವುದೇ ಪ್ರದೇಶ ಅಥವಾ ನಾಡು ಅಭಿವೃದ್ಧಿಯಾಗಬೇಕೆಂದರೆ ಅದೂ ಚುನಾಯಿತ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ, ಆದ್ದರಿಂದ ಯುವಕರು ರಾಜಕೀಯಕ್ಕೆ ಬರಬೇಕೆಂದು ಕಿವಿಮಾತು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಕೈ ಬಲಪಡಿಸಿ, ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಪೂರ್ಣ ಪ್ರಮಾಣದ ನಮ್ಮದೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೇರ್ಪಡೆ: ಗಂವಾರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ವಿಶ್ವರಾಧ್ಯ ಬಡಿಗೇರ, ಶರಣು ಕಸನ್, ಬಸವರಾಜ ಶಾಖಾಪುರ, ಭೀಮರಾಯ ಶಾಕಾಪುರ, ಹಣಮಂತ ಕಸನ್, ಶರಣಪ್ಪ ಹಾಲಬಾವಿ, ಬಸವರಾಜ ರಾಜಾಪುರ, ಸಿದ್ರಾಮ ಜನಿವಾರ, ಮಹಬೂಬ್ ಪಟೇಲ್, ಖಾಶೀಂ ಪಟೇಲ್, ಗುಡೂಸಾಬ್ ಪಟೇಲ್, ಅಮೃತ ಕಸನ್, ಬಸವರಾಜ ಹೂಲಿ ಸೇರ್ಪಡೆಗೊಂಡರು.
ಚನ್ನೂರ ಗ್ರಾಮದ ಇಮ್ತಿಯಾಜ್ ಪಟೇಲ್, ಮಲ್ಲಪ್ಪ ಸಂಗಪ್ಪ.ದೌಲತ್ ಪುಜಾರಿ, ಬಸಪ್ಪ ತೆರಟ್, ಮಹಾಂತಪ್ಪ ಹಾಲಗಡ್ಲಿ, ಗುಂಡ ದೌಲಾಪುರ, ಯಸೀನ್ ಪಟೇಲ್, ಜೇವರ್ಗಿ ವಿದ್ಯಾನಗರದ ರಾಜು ಅಪ್ಪಣ್ಣನವರ್, ಮಹಾಲಿಂಗಪ್ಪ ಪುಜಾರಿ, ಹಣಮಂತ ಶಿವಪ್ಪ, ಪೀರಪ್ಪ, ಬಸವರಾಜ, ಲಕ್ಷಣ ಇಜೇರಿ, ರಫೀಕ್ ಮಹಬೂಬ್ ಸಾಬ್ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಕೆಜೆಪಿಗೆ ನೇಮಕ
ಗುಲ್ಬರ್ಗ/ಶಹಾಬಾದ್: ಇಂಗಳಗಿ ಗ್ರಾಮದ ಯುವ ಮುಖಂಡ ಬಸವಂರಾವ ಪಾಟೀಲ್ (ಗುಂಡು ಪಾಟೀಲ್) ಅವರನ್ನು ಕೆಜೆಪಿಯ ಚಿತ್ತಾಪುರ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಕೆಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶದ ಮೇರೆಗೆ ತಾಲೂಕು ಅಧ್ಯಕ್ಷ ಗೋಪಾಲ ರಾಠೋಡ ನೇಮಿಸಿದ್ದಾರೆ.