ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜುಗೌಡ ನಾಮಪತ್ರ ಸಲ್ಲಿಕೆಗೆ ಜನಸ್ತೋಮ

Lingaraj Badiger
Updated On : 16 Apr 2013, 10:59 am

ಸುರಪುರ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸೋಮವಾರ ಮಾಜಿ ಸಚಿವ ರಾಜುಗೌಡರು ನಾಮಪತ್ರ ಸಲ್ಲಿಸುತ್ತಾರೆ ಎಂಬ ಸುದ್ದಿ ತಿಳಿದ ಅವರ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಜನಸ್ತೋಮವೇ ಹರಿದು ಬಂದಿತ್ತು.
ಮಾಜಿ ಸಚಿವರು ತಿಂಥಣಿ ಮೌನೇಶ್ವರ, ಕೊಡೇಕಲ್ ಬಸವಣ್ಣ, ದೇವರಗಡ್ಡಿಯ ಗಡ್ಡೆಮ್ಮ, ಕಕ್ಕೇರಾ ಸೋಮನಾಥೇಶ್ವರ, ವೇಣುಗೋಪಾಲಸ್ವಾಮಿ ದೇವರನ್ನು ನೆನೆದ ಅವರು ಸುಮಾರು 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಸೋಮವಾರ ಬೆ.11 ಗಂಟೆಗೆ ತಮ್ಮ ನಿವಾಸದಿಂದ ಪಾದಯಾತ್ರೆ ಹೊರಟರು. ಹನುಮಾನ ಟಾಕೀಸ್ ರಸ್ತೆಯ ಮೂಲಕ ಗಾಂಧಿ ವೃತ್ತಕ್ಕೆ ತೆರಳಿ ಮಹಾತ್ಮ ಗಾಂಧೀಜಿಗೆ ಮಾಲಾರ್ಪಣೆ ಮಾಡಿ ಮಿನಿ ವಿಧಾನಸೌಧಕ್ಕೆ ತೆರಳಿದರು. ಅಲ್ಲಿ ತಮ್ಮ ತಾಯಿಯ ಪಾದಕ್ಕೆ ನಮಸ್ಕರಿಸಿ ಜೆಡಿಎಸ್‌ನಿಂದ ಮೂರು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಕಿಶೋರಚಂದ ಜೈನ್, ಯಲ್ಲಪ್ಪ ಕುರುಕುಂದಿ, ನಿಂಗಣ್ಣ ಬಾದ್ಯಾಪುರ, ನಾಗಣ್ಣ ಸಾಹು ದಂಡಿನ್, ಬಸವರಾಜ ಸ್ಥಾವರಮಠ, ಚಂದ್ರಶೇಖರ ದಂಡಿನ್, ಸಲೀಂ ವರ್ತಿ, ಮಲ್ಲಿಕಾರ್ಜುನ ಹಿರೇಮಠ, ಭೀಮಾಶಂಕರ ಬಿಲ್ಲವ್, ಪರಮಣ್ಣ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement