ಶುಭ ದಿನದಂದು 37 ನಾಮಪತ್ರ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.15
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಒಟ್ಟು 23 ಅಭ್ಯರ್ಥಿಗಳು 37 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಸುರಪುರ ವಿಧಾನಸಭಾ ಕ್ಷೇತ್ರದಿಂದ 6 ಅಭ್ಯರ್ಥಿಗಳಿಂದ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ. ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್‌ನಿಂದ 1, ನರಸಿಂಹ ನಾಯಕ(ರಾಜುಗೌಡ) ಜೆಡಿಎಸ್‌ನಿಂದ 3 ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ 1 ನಾಮಪತ್ರ ಸಲ್ಲಿಸಿದ್ದಾರೆ. ರಾಜಾ ಮದನಗೋಪಾಲ ನಾಯಕ ಅವರು ಬಿಜೆಪಿಯಿಂದ 2, ತಿಮ್ಮಮ್ಮ ಶಂಭನಗೌಡ ಅವರು ಜೆಡಿಎಸ್‌ನಿಂದ 2, ರಾಮಲಿಂಗಪ್ಪ ಅವರು ಜೆಡಿಯುದಿಂದ 1 ಹಾಗೂ ನಂದಕುಮಾರ ಮಾಲಿಪಾಟೀಲ ಅವರು ಬಿಎಸ್ಸಾರ್ ಕಾಂಗ್ರೆಸ್‌ನಿಂದ 1 ನಾಮಪತ್ರ ಸಲ್ಲಿಸಿದ್ದಾರೆ.
ಶಹಾಪುರ ವಿಧಾನಸಭಾ ಕ್ಷೇತ್ರದಿಂದ 5 ಅಭ್ಯರ್ಥಿಗಳಿಂದ ಒಟ್ಟು 8 ನಾಮಪತ್ರ ಸ್ವೀಕರಿಸಲಾಗಿದೆ. ಬಸವರಾಜ ಪಡಕೋಟೆ ಪಕ್ಷೇತರ ಅಭ್ಯರ್ಥಿಯಾಗಿ 1, ಶರಣಬಸಪ್ಪಗೌಡ ದರ್ಶನಾಪುರ ಕಾಂಗ್ರೆಸ್‌ನಿಂದ 2, ಗುರುಪಾಟೀಲ ಶಿರವಾಳ ಕೆಜೆಪಿಯಿಂದ 1, ಶಂಕ್ರಣ್ಣ ವಣಿಕ್ಯಾಳ ಬಿಎಸ್ಸಾರ್ ಕಾಂಗ್ರೆಸ್‌ನಿಂದ 2, ಮಹಮ್ಮದ್ ಅನ್ವರ ಪಾಷಾ ಅವರು ಬಿಎಸ್ಪಿಯಿಂದ 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ 5 ಅಭ್ಯರ್ಥಿಗಳಿಂದ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿವೆ. ಡಾ. ವೀರಬಸವಂತರೆಡ್ಡಿ ಮುದ್ನಾಳ ಕೆಜೆಪಿಯಿಂದ 2, ಚಂದ್ರಶೇಖರ ಮಾಗನೂರ ಬಿಜೆಪಿಯಿಂದ 2, ಜಲಂಧರರಾವ್ ಪಕ್ಷೇತರ ಅಭ್ಯರ್ಥಿಯಾಗಿ 1, ಡಾ. ಎ.ಬಿ. ಮಾಲಕರೆಡ್‌ಡಿ ಕಾಂಗ್ರೆಸ್‌ನಿಂದ 1 ಹಾಗೂ ಮೌಲಾಲಿ ಅನಪುರ ಅವರು ಬಿಎಸ್ಸಾರ್ ಕಾಂಗ್ರೆಸ್‌ನಿಂದ 1 ನಾಮಪತ್ರ ಸಲ್ಲಿಸಿದ್ದಾರೆ.
ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 7 ಅಭ್ಯರ್ಥಿಗಳಿಂದ 11 ನಾಮಪತ್ರಗಳು ಸಲ್ಲಿಕೆಯಾಗಿವೆ.
ವೆಂಕಟರೆಡ್ಡಿ ಮುದ್ನಾಳ ಕೆಜೆಪಿಯಿಂದ 2, ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್‌ನಿಂದ 2, ಗಿರೀಶ್ ಮಟ್ಟಣ್ಣವರ್ ಬಿಜೆಪಿಯಿಂದ 1, ನಾಗಣಗೌಡ ಕಂದಕೂರ ಜೆಡಿಎಸ್‌ನಿಂದ 2, ಶರಣಗೌಡ ಕಂದಕೂರ ಜೆಡಿಎಸ್‌ನಿಂದ 2, ಶರಣಪ್ಪ ಗೌಡಗೇರಾ ಸ್ವತಂತ್ರ ಅಭ್ಯರ್ಥಿಯಾಗಿ 1 ಹಾಗೂ ಶಾಲಿನಿ ಕೋರಿ ಸ್ವತಂತ್ರ ಅಭ್ಯರ್ಥಿಯಾಗಿ 1 ನಾಮಪತ್ರ ಸಲ್ಲಿಸಿದ್ದಾರೆ.