ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶುಭ ದಿನದಂದು ಉಮೇದುವಾರಿಕೆ ಸುರಿಮಳೆ

Lingaraj Badiger
Updated On : 16 Apr 2013, 11:03 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.15
ಸೋಮವಾರ ಗುಲ್ಬರ್ಗದಲ್ಲಿ ನಾಮಪತ್ರಗಳ ಸುರಿಮಳೆ, ಶುಭ ಸೋಮವಾರವೆಂದು ಹಾಗೂ ಉತ್ತಮ ಮುಹೂರ್ತ ಇದೇದಿನ ಇದೆ ಎಂದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳೆಲ್ಲರೂ ಬಹುತೇಕ ನಗರ ಹಾಗೂ ಜಿಲ್ಲಾದ್ಯಂತ ನಾಮಪತ್ರ ಸಲ್ಲಿಸಿದ್ದಾರೆ.
ಮಾಲೀಕಯ್ಯಾ ಗುತ್ತೇದಾರ್, ಎಂ.ವೈ. ಪಾಟೀಲ್, ದೊಡ್ಡಪ್ಪಗೌಡ ನರಿಬೋಳ್, ಡಾ. ಅಜಯ್‌ಸಿಂಗ್, ಪ್ರಿಯಾಂಕ ಖರ್ಗೆ, ಮಾಜಿ ಸಚಿವ ಸಿ. ಗುರುನಾಥ, ಬಾಬುರಾವ ಚವ್ಹಾಣ್, ರಾಮಕೃಷ್ಣ, ಡಾ. ಶರಣಪ್ರಕಾಶ ಪಾಟೀಲ್, ಶಶಿಲ್ ನಮೋಶಿ, ಸುಭಾಶ ಗುತ್ತೇದಾರ್ ಸೇರಿದಂತೆ ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ.
ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೆ.5 ರಂದು ನಡೆಯುವ ಚುನಾವಣೆಗಾಗಿ ಸೋಮವಾರ ಒಂದೇ ದಿನ 50 ಅಭ್ಯರ್ಥಿಗಳು ಒಟ್ಟು 84 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಈವರೆಗೆ ಒಟ್ಟು 62 ಅಭ್ಯರ್ಥಿಗಳಿಂದ 98 ನಾಮಪತ್ರಗಳನ್ನು ಸ್ವೀಕರಿಸಿದಂತಾಗಿದೆ.
ಸೋಮವಾರದಂದು ವಿಧಾನಸಭಾ ಕ್ಷೇತ್ರವಾರು ನಾಮಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.
1) ಅಫಜಲ್ಪುರ: ಗೋವಿಂದ ತಂದೆ ವಿಶ್ವನಾಥ ಭಟ್- ಸಮಾಜವಾದಿ ಪಕ್ಷ, ವಿಠ್ಠಲ್ ತಂದೆ ತಿಪ್ಪಣ್ಣ ಹೇರೂರ-ಜೆಡಿಎಸ್, ದಿಲೀಪ ತಂದೆ ರಾಮಚಂದ್ರ ಪಾಟೀಲ್- ಬಿಜೆಪಿ, ಮಲಕಾಜಪ್ಪ ತಂದೆ ಯಶ್ವಂತರಾವ ಪಾಟೀಲ್-ಕೆಜೆಪಿ, ಮಾಲೀಕಯ್ಯ ತಂದೆ ವೆಂಕಯ್ಯ ಗುತ್ತೇದಾರ- ಕಾಂಗ್ರೆಸ್, ಅರುಣಕುಮಾರ ತಂದೆ ಮಲಕಾಜಪ್ಪ ಪಾಟೀಲ್- ಕೆಜೆಪಿ.
2) ಜೇವರ್ಗಿ: ಹರಿಶ್ಚಂದ್ರ- ಪಕ್ಷೇತರ, ಶಂಕರ- ಪಕ್ಷೇತರ, ದೊಡ್ಡಪ್ಪಗೌಡ ಪಾಟೀಲ್- ಬಿಜೆಪಿ, ಅಜಯಸಿಂಗ್ ತಂದೆ ಎನ್. ಧರ್ಮಸಿಂಗ್- ಕಾಂಗ್ರೆಸ್, ಕೇದಾರಲಿಂಗಯ್ಯ- ಜೆಡಿಎಸ್, ಮಲ್ಲಿಕಾರ್ಜುನಗೌಡ ಪಾಟೀಲ್-ಕೆಜೆಪಿ, ಬೈಲಪ್ಪ- ಬಿಎಸ್‌ಆರ್ (ಕಾಂಗ್ರೆಸ್), ಹುಸೇನ್ ಪಟೇಲ್- ಬಿಎಸ್‌ಪಿ, ಭೀಮಯ್ಯ- ಪಕ್ಷೇತರ.  
3) ಚಿತ್ತಾಪುರ: (ಮೀಸಲು- ಎಸ್‌ಸಿ): ಮಲ್ಲಿಕಾರ್ಜುನ ಖರ್ಗೆ- ಕಾಂಗ್ರೆಸ್, ವಾಲ್ಮೀಕಿ ತಂದೆ ಕಮಲು ನಾಯಕ- ಬಿಜೆಪಿ, ಗುರುನಾಥ ತಂದೆ ಚಂದ್ರಾಮ- ಕೆಜೆಪಿ, ರಮಾದೇವಿ ಗಂಡ ರಾಜಕುಮಾರ- ಪಕ್ಷೇತರ, ಮಹೇಶ ತಂದೆ ಸಾಬಣ್ಣ- ಪಕ್ಷೇತರ.
4) ಸೇಡಂ: ರಾಜಕುಮಾರ ತಂದೆ ವೀರಶೆಟ್ಟೆಪ್ಪ- ಬಿಜೆಪಿ, ಶರಣಪ್ರಕಾಶ ತಂದೆ ರುದ್ರಪ್ಪ ಪಾಟೀಲ್- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ವೆಂಕಟೇಶ ತಂದೆ ಮಾರುತಿರಾವ- ಪಕ್ಷೇತರ, ಮುಕ್ರಂಖಾನ್ ತಂದೆ ಆಜಂಖಾನ್-ಜೆಡಿಎಸ್.  
5) ಚಿಂಚೋಳಿ (ಎಸ್‌ಸಿ ಮೀಸಲು): ಡಾ.ಉಮೇಶ ಜಾಧವ ತಂದೆ ಗೋಪಾಲದೇವ- ಕಾಂಗ್ರೆಸ್, ಸುನೀಲ್ ವಲ್ಯಾಪುರೆ ತಂದೆ ಯಮುನಪ್ಪ- ಕೆಜೆಪಿ, ಮಲ್ಲಿಕಾರ್ಜುನ ಗಾಜರೆ ತಂದೆ ನರಸಿಂಗರಾವ- ಜೆಡಿಎಸ್.
6) ಗುಲ್ಬರ್ಗ ಗ್ರಾಮಾಂತರ (ಎಸ್‌ಸಿ ಮೀಸಲು): ಜಿ. ರಾಮಕೃಷ್ಣ ತಂದೆ ಗೋವಿಂದಪ್ಪ- ಕಾಂಗ್ರೆಸ್, ರೇವುನಾಯಕ ತಂದೆ ಲೋಕು- ಬಿಜೆಪಿ, ಬಾಬು ತಂದೆ ಹೊನ್ನಾನಾಯಕ- ಬಡವರ ಶ್ರಮಿಕರ ರೈತರ ಕಾಂಗ್ರೆಸ್, ಡಾ. ಲಕ್ಷ್ಮಣ ರಾಠೋಡ ತಂದೆ ಮೋತಿರಾಮ ರಾಠೋಡ- ಪಕ್ಷೇತರ, ಧೂಳಪ್ಪ ತಂದೆ ಗುಂಡಪ್ಪ- ಜೆಡಿಎಸ್, ಬಾಬುರಾವ ಚವ್ಹಾಣ ತಂದೆ ಸುಬ್ಬಣ್ಣ- ಕೆಜೆಪಿ, ಮಾರುತಿ ತಂದೆ ತುಕಾರಾಮ- ಸಿಪಿಐ(ಎಂ), ಬಾಬು ತಂ. ಭೀಮಲಾ ನಾಯಕ- ಪಕ್ಷೇತರ.
7) ಗುಲ್ಬರ್ಗ ದಕ್ಷಿಣ: ಧರ್ಮವೀರ ತಂದೆ ಶ್ಯಾಮರಾವ- ಪಕ್ಷೇತರ, ಅಮಲಪ್ಪ ತಂದೆ ಭೀಮಪ್ಪ- ಪಕ್ಷೇತರ, ಕೈಲಾಸನಾಥ ಪಾಟೀಲ್ ತಂದೆ ವೀರೇಂದ್ರ ಪಾಟೀಲ್- ಕಾಂಗ್ರೆಸ್, ಶಶೀಲ್ ಜಿ. ನಮೋಶಿ ತಂದೆ ಗಂಗಾಧರ ನಮೋಶಿ- ಜೆಡಿಎಸ್, ವಿನೋದಕುಮಾರ ತಂದೆ ಬ್ರಹ್ಮ ಜ್ಞಾನಿ- ಆರ್‌ಪಿಐ(ಎ), ದತ್ತಾತ್ರೇಯ ಸಿ. ಪಾಟೀಲ್ ತಂದೆ ಚಂದ್ರಶೇಖರ ಪಾಟೀಲ್- ಬಿಜೆಪಿ, ನಾಗಮ್ಮ ಗಂಡ ಎಚ್.ವಿ. ದಿವಾಕರ- ಎಸ್‌ಯುಸಿಐಸಿ
8) ಗುಲ್ಬರ್ಗ ಉತ್ತರ: ಅಬ್ದುಲ್ ಹಮೀದ್ ತಂದೆ ಮಹ್ಮದ್ ಯೂಸೂಫ್- ವೆಲಫೇರ್ ಪಾರ್ಟಿ ಆಫ್ ಇಂಡಿಯಾ, ನರಸಿಂಗ್ ತಂದೆ ವಿಶ್ವನಾಥ- ಪಕ್ಷೇತರ ಮತ್ತು ರಾಜಗೋಪಾಲ ತಂದೆ ಪಾಪಯ್ಯ ರೆಡ್ಡಿ- ಬಿಜೆಪಿ, ನಾಸೀರ್ ಹುಸೇನ್ ತಂದೆ ಸಾದತ್ ಹುಸೇನ್- ಕೆಜೆಪಿ.  
9) ಆಳಂದ: ಭೋಜರಾಜ ತಂದೆ ರಾಮಚಂದ್ರ- ಕೆಜೆಪಿ, ಸುಭಾಷ ತಂದೆ ರುಕ್ಮಯ್ಯ- ಜೆಡಿಎಸ್, ಹರ್ಷಾ ತಂದೆ ಸುಭಾಷ- ಜೆಡಿಎಸ್, ಪವಡಶೆಟ್ಟಿ ಬಸವರಾಜ ತಂದೆ ನಾಗಪ್ಪ- ಬಿಜೆಪಿ.
ಏ.17 ನಾಮಪತ್ರ ಸ್ವೀಕರಿಸುವ ಕೊನೆಯ ದಿನವಾಗಿದ್ದು, ಏ.20 ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆ ದಿನವಾಗಿದೆ.

ಸೇಡಂಗೆ ಬಿಎಸ್‌ವೈ
ಗುಲ್ಬರ್ಗ: ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏ.16ರಂದು ಬೆಳಗ್ಗೆ 11ಕ್ಕೆ ಹೆಲಿಕ್ಯಾಪ್ಟರ್ ಮುಖಾಂತರ ಸೇಡಂ ತಾಲೂಕಿಗೆ ಬರಲಿದ್ದಾರೆ.  ಚುನಾವಣಾ ಪ್ರಚಾರದ ನಿಮಿತ್ತವಾಗಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಬೇಕೆಂದು ಗುಲ್ಬರ್ಗ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಇಂಗಿನ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement