ಸುರಪುರ(ಮೀ) ಕ್ಷೇತ್ರಕ್ಕೆ 11 ನಾಮಪತ್ರ ಸಲ್ಲಿಕೆ
ಸುರಪುರ: ತೀವ್ರ ಜಿದ್ದಾಜಿದ್ದಿ ಕ್ಷೇತ್ರವೆಂದೇ ಖ್ಯಾತಿ ಪಡೆದ ಸುರಪುರ ಎಸ್ಟಿ ಮೀಸಲು ಕ್ಷೇತ್ರಕ್ಕೆ ಸೋಮವಾರ 6 ಅಭ್ಯರ್ಥಿಗಳಿಂದ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಬಸವರಾಜ ಸುಣ್ಣದ ತಿಳಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ನಿಂದ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಬಿಜೆಪಿಯಿಂದ, ನರಸಿಂಹ ನಾಯಕ(ರಾಜುಗೌಡ), ತಿಮ್ಮಮ್ಮ ಶಂಭನಗೌಡ ಕೊಡೇಕಲ್ ಜೆಡಿಎಸ್ನಿಂದ, ನಂದಕುಮಾರ ಮಾಲಿಪಾಟೀಲ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ, ಸಂಯುಕ್ತ ಜನತಾ ದಳದಿಂದ ರಾಮಲಿಂಗಪ್ಪ ಅರಳಹಳ್ಳಿ ನಾಮಪತ್ರ ಸಲ್ಲಿಸಿದರು.
ರಾಜಾ ವೆಂಕಟಪ್ಪ ನಾಯಕ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಣ್ಣ ಮಂಗೀಹಾಳ. ಪ್ರಭುಗೌಡ ಪಾಟೀಲ್, ಅಬ್ದುಲ್ ಗಫಾರ್ ನಗನೂರಿ ಇದ್ದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ನಾಮಪತ್ರ ಸಲ್ಲಿಸುವ ವೇಳೆ ಮಲ್ಲೇಶಿ ಪಾಟೀಲ್ ನಾಗರಾಳ, ಹರ್ಷವರ್ಧನ ನಾಯಕ, ರಾಜಾ ಮುಕುಂದ ನಾಯಕ ಇದ್ದರು. ಮಾಜಿ ಸಚಿವ ರಾಜುಗೌಡ ನಾಮಪತ್ರ ಸಲ್ಲಿಸುವಾಗ ನಾಗಣ್ಣ ಸಾಹು ದಂಡಿನ್, ನಿಂಗಣ್ಣ ಬಾದ್ಯಾಪುರ, ಯಲ್ಲಪ್ಪ ಕುರುಕುಂದಿ, ರಾಜಾ ಹನುಮಪ್ಪ ನಾಯಕ(ತಾತಾ), ಬಸವರಾಜ ಸ್ಥಾವರಮಠ, ಪರಮಣ್ಣ ಪೂಜಾರಿ, ಜಗದೀಶ ಕುಲಕರ್ಣಿ, ಮಲ್ಲಂಗ ಷಾ ಇದ್ದರು.
ತಿಮ್ಮಮ್ಮ ಶಂಭನಗೌಡ ಕೊಡೇಕಲ್ ನಾಮಪತ್ರ ಸಲ್ಲಿಸುವಾಗ ಕಿಶೋರಚಂದ ಜೈನ್, ಮಹ್ಮದ ಸಲೀಂ ವರ್ತಿ, ಭೀಮಾಶಂಕರ ಬಿಲ್ಲವ್, ಚಂದ್ರಶೇಖರ ದಂಡಿನ್, ಮೋತಿರಾಮ ಚವ್ಹಾಣ, ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಇದ್ದರು.