ಅಪಘಾತ: ನಾಲ್ವರು ದುರ್ಮರಣ
ಗುಲ್ಬರ್ಗ: ಹುಮ್ನಾಬಾದ್- ಬಿಜಾಪುರ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿರುವ ಭೀಕರ ರಸ್ತೆ ದುರಂತದಲ್ಲಿ ಅಫಜಲ್ಪೂರ ತಾಲೂಕಿನ ಘತ್ತರಗಿಯಲ್ಲಿರುವ ಭಾಗ್ಯವಂತಿದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣದ ಮುಡಬಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಸೇರಿದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೈದರಾಬಾದ್ನಿಂದ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ನವನಿಹಾಳ ಕ್ರಾಸ್ ಬಳಿ ರಸ್ತೆಯ ಎಡಗಡೆಯಲ್ಲಿ ತಮ್ಮ ಪಾಡಿಗೆ ತಾವು ಪಾದಯಾತ್ರೆಯಲ್ಲಿದ್ದ 10 ಭಕ್ತರ ತಂಡದ ಮೇಲೆಯೇ ಹರಿದಿದೆ. ನೋಡ ನೋಡುತ್ತಿದ್ದಂತೆಯೇ ತಂಡದ ಎಲ್ಲರೂ ರಕ್ತದ ಮಡುವಿನಲ್ಲಿ ಮುಳುಗಿದ್ದಾರೆ. ಉಳಿದವರು ಗಾಯಗೊಂಡಿದ್ದಾರೆ.
ಕಾಡಾನೆಗಳ ದಾಳಿ: ಬೆಳೆ ಹಾನಿ
ಶನಿವಾರಸಂತೆ: ಸಮೀಪದ ಎಳೆನೀರು ಗುಂಡಿಯ ಸುಬ್ಬಣ , ಅವರಿಗೆ ಸೇರಿದ ಎಳೆನೀರು ಗುಂಡಿ ಎಸ್ಟೇಟ್ನ ಕಾಫಿ, ಬಾಳೆ ಅಡಕೆತೋಟಕ್ಕೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಅಡಕೆ, ಬಾಳೆ ಗಿಡಗಳಿಗೆ ಹಾನಿಯಾಗಿವೆ. ನಿಡ್ತ ಮೀಸಲು ಅರಣ್ಯದಿಂದ ಪ್ರತಿನಿತ್ಯ ಸಂಜೆ 6 ಗಂಟೆಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಇವರ ತೋಟದ ಮಧ್ಯೆ ನೀರಿನ ಕೆರೆ ಇರುವುದರಿಂದ ನೀರು ಕುಡಿಯಲು ಕಾಡಿನಿಂದ ಬರುತ್ತಿತ್ತು. ಇವರು ಬೆಳೆಸಿರುವ ಮರಗೆಣಸು ಸೇರದಂತೆ ಬಾಳೆ ಗಿಡ, ಕಾಫಿ, ಅಡಕೆಗಳನ್ನು ಹಾಳು ಮಾಡುತ್ತಿದೆ.