ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಂಗ್ರೆಸ್, ಬಿಎಸ್ಆರ್, ಎಸ್ಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Lingaraj Badiger
Updated On : 17 Apr 2013, 11:53 am

ಕನ್ನಡಪ್ರಭ ವಾರ್ತೆ, ಆಳಂದ, ಏ.16
ಆಳಂದ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್, ಬಿಎಸ್ಆರ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಸೇರಿ ಮಂಗಳವಾರ ಕೂಡ ನಾಲ್ವರು ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆ ಬಯಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಸೋಮವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಒಳಗೊಂಡು ಒಟ್ಟು ಇದುವರೆಗೂ 8 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಬಲಿಗರೊಂದಿಗೆ ನಾಮಪತ್ರ: ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಣ್ಣ ಮಾಸ್ಟರ್ ಶೇಗಜಿ, ಬಿಎಸ್ಆರ್ ಕಾಂಗ್ರೆಸ್ನಿಂದ ಉದಯಕುಮಾರ ಬಿರಾದಾರ ಮತ್ತು ಸಮಾಜವಾದಿ ಪಕ್ಷದಿಂದ ಕೆ.ಎಂ.ಬುರ್ಲೆ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಜಹೀರ ಇಬ್ರಾಹಿಂ ಅವರು ಬೆಂಬಲಿಗರು ಹಾಗೂ ಆಯಾ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿ ತಹಸೀಲ್ದಾರ್ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬ್ಲಾಕ್ ಅಧ್ಯಕ್ಷ ಶಂಕರರಾವ ದೇಶಮುಖ, ಮಾದನಹಿಪ್ಪರಗಾ ಬ್ಲಾಕ್ ಅಧ್ಯಕ್ಷ ಗುರುಶಾಂತ ಪಾಟೀಲ್ ನಿಂಬಾಳ, ಜಿಪಂ ಮಾಜಿ ಸದಸ್ಯರಾದ ಮಲ್ಲಿನಾಥ ಪಾಟೀಲ್ ಮದಗುಣಕಿ, ಶಿವರಾಜ ಭಾಸಗಿ, ಬಾಲಚಂದ್ರ ಸೂರ್ಯವಂಶಿ, ವೀರಣ್ಣ ಮಂಗಾಣೆ, ಪಕ್ಷದ ಮುಖಂಡ ದತ್ತಪ್ಪ ಹೊನ್ನಳ್ಳಿ, ಶರಣು ಭೂಸನೂರ, ಉಸ್ಮಾನ ಡಾಂಗೆ, ಕಿರಣ ದೇಶಮುಖ, ಅರವಿಂದ ಪಾಟೀಲ್, ಬಸೀರೋದ್ದೀನ್ ಗುತ್ತೇದಾರ, ಪುರಸಭೆ ಸದಸ್ಯ ಅಯೂಬಲಿ ರೋತೆ ಶರಣು ಜವಳಿ, ಬಸವರಾಜ ಬಿರಾದಾರ, ಈರಣ್ಣ ಝಳಕಿ, ಮಲ್ಲಿನಾಥ ನಿಂಬಾಳ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಬಿಎಸ್ಆರ್ ಅಭ್ಯರ್ಥಿ ಪರವಾಗಿ ಅನೇಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಪರವಾಗಿ ನ್ಯಾಯವಾದಿ ಕೆ. ಮಲ್ಲಿಕಾರ್ಜುನ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement