ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೇವರ್ಗಿ; ನಾಮಪತ್ರ ಸಲ್ಲಿಕೆ ಭರಾಟೆ

Lingaraj Badiger
Updated On : 17 Apr 2013, 11:53 am

ಜೇವರ್ಗಿ: ಮೆ.5 ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ ಕಚೇರಿಗೆ ಆಗಮಿಸಿದ ಅಭ್ಯರ್ಥಿಗಳು ಚುನಾವಣಾಧಿಕಾರಿ ಎಂ.ಎಸ್. ಚಿದಾನಂದ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಕಾಂಗ್ರೆಸ್ನಿಂದ ಕೆಪಿಸಿಸಿ ಸದಸ್ಯ ಡಾ.ಅಜಯಸಿಂಗ್, ಜೆಡಿಎಸ್ನಿಂದ ಕೇದಾರಲಿಂಗಯ್ಯ ಹಿರೇಮಠ, ಕೆಜೆಪಿಯಿಂದ ಮಲ್ಲಿನಾಥಗೌಡ ಯಲಗೋಡ, ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಬೈಲಪ್ಪ ನೆಲೋಗಿ, ಬಿಎಸ್ಪಿಯಿಂದ ಹುಸೇನ್ ಪಟೇಲ್ ಹೂಡಾ, ಪಕ್ಷೇತರರಾಗಿ ಶಂಕರ ನಿಜಲಿಂಗಪ್ಪ ದೊಡ್ಮನಿ, ಹರಿಶ್ಚಂದ್ರ ಗವನಳ್ಳಿ, ಭೀಮಯ್ಯ ಸೋಮಯ್ಯ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.17 ಕೊನೆ ದಿನ. ಸೋಮವಾರದವರೆಗೆ ಒಟ್ಟು 12 ಅಭ್ಯರ್ಥಿಗಳಿಂದ 23 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಎಂ.ಎಸ್. ಚಿದಾನಂದ ತಿಳಿಸಿದ್ದಾರೆ.

4 ನಾಮಪತ್ರ ಸಲ್ಲಿಕೆ
ಅಫಜಲ್ಪುರ: ಅಫಜಲ್ಪುರ ವಿಧಾನಸಭೆಗೆ ಮಂಗಳವಾರ ಇಬ್ಬರು ಅಭ್ಯರ್ಥಿಗಳು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ನಿಂದ ಭಾಷಾ ಪಟೇಲ್ ಹಸರಗುಂಡಗಿ ಮೂರು ನಾಮಪತ್ರ ಸಲ್ಲಿಸಿದರೆ, ಕೆಜೆಪಿಯಿಂದ ಎಂ.ವೈ. ಪಾಟೀಲ್ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ವಿ. ಹಿರೇಮಠ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement