ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮದ್ಯ; ಮಾಹಿತಿ ನೀಡಲು ಮನವಿ

Lingaraj Badiger
Updated On : 17 Apr 2013, 11:55 am

ಗುಲ್ಬರ್ಗ: ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಜಿಲ್ಲಾದ್ಯಂತ ಸಾರಾಯಿ, ನಕಲಿ ಮದ್ಯ ಮತ್ತು ಸೇಂದಿಗಳಂತಹ ಅಬಕಾರಿ ವಸ್ತುಗಳ ಮಾರಾಟವಾಗುವ ಸಾಧ್ಯತೆ ಇರುತ್ತದೆ. ಇಂತಹ ಅಬಕಾರಿ ಪೇಯ ಪದಾರ್ಥಗಳನ್ನು ಸೇವಿಸಬಾರದೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ. ಒಂದು ವೇಳೆ ಇಂತಹ ಅಬಕಾರಿ ವಸ್ತುಗಳ ಸೇವನೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಲಾಗುವುದಿಲ್ಲ. ಈ ಘಟನೆಗೆ ಸರ್ಕಾರ ಜವಾಬ್ದಾರವಾಗುವುದಿಲ್ಲ ಎಂಬ ವಿಷಯವನ್ನು ಸಾರ್ವಜನಿಕ ಗಮನಕ್ಕೆ ತರಲಾಗಿದೆ. ಇಂತಹ ಅಕ್ರಮ ಕಂಡುಬಂದಲ್ಲಿ ಈ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಲು ಕೋರಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ಸಹ ಕೊಡಲಾಗುವುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ಗುಲ್ಬರ್ಗ ಉಪ ಅಧೀಕ್ಷಕರು, ಗುಲ್ಬರ್ಗ ಉಪ ವಿಭಾಗ- 08472- 278684, 94495 97146. ಅಬಕಾರಿ ಉಪ ಅಧೀಕ್ಷಕರು, ಚಿತ್ತಾಪುರ ಉಪ ವಿಭಾಗ- 04874- 236811, 94495 97148. ಅಬಕಾರಿ ನಿರೀಕ್ಷಕರು, ವಲಯ ನಂ- 1 ಗುಲ್ಬರ್ಗ- 08472- 255639, 77955 77449. ಅಬಕಾರಿ ನಿರೀಕ್ಷಕರು, ವಲಯ ನಂ- 2 ಗುಲ್ಬರ್ಗ- 98867 22222. ಅಬಕಾರಿ ನಿರೀಕ್ಷಕರು, ವಲಯ ಆಳಂದ- 08477- 203127, 97315 99902. ಅಬಕಾರಿ ನಿರೀಕ್ಷಕರು, ವಲಯ ಜೇವರ್ಗಿ- 08442- 235215, 96110 50111. ಅಬಕಾರಿ ನಿರೀಕ್ಷಕರು, ವಲಯ ಚಿತ್ತಾಪುರ- 08474- 236770, 96119 72288. ಅಬಕಾರಿ ನಿರೀಕ್ಷಕರು, ವಲಯ ಸೇಡಂ- 08441- 277141, 94492 66432. ಅಬಕಾರಿ ನಿರೀಕ್ಷಕರು ವಲಯ ಚಿಂಚೋಳಿ- 08475- 273490, 94496 18814. ಜಿಲ್ಲಾ ಕಂಟ್ರೋಲ್ ರೂಮ್ ಅಬಕಾರಿ ಭವನ ಗುಲ್ಬರ್ಗ- 08472- 278682, 94495 97143.
ನೀತಿ ಸಂಹಿತೆ; 8 ಪ್ರಕರಣ ದಾಖಲು
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ.5ರಂದು ನಡೆಯುವ ಚುನಾವಣೆ ಪ್ರಯುಕ್ತ ಏ.14ರವರೆಗೆ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 100 ಕಾಲೆಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಏ.14ರಂದು 21 ಲಕ್ಷ ನಗದು ಹಣ ಹಾಗೂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 6 ಲಕ್ಷ ಸಾಕ್ಷಾಧಾರ ಲಭ್ಯವಾದ ಬಳಿಕ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗಿದೆ. ಉಳಿದ 15 ಲಕ್ಷ ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ಗೆ ಹಾಗೂ ಬೆಳ್ಳಿ ಸಾಮಾನುಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಗಿದೆ. ಈ ಕುರಿತು ಈವರೆಗೂ ಪ್ರಕರಣ ದಾಖಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement