ಯಾಕಾಪುರ ಸೇರಿ 5 ನಾಮಪತ್ರ ಸಲ್ಲಿಕೆ
ಚಿಂಚೋಳಿ: ಚಿಂಚೋಳಿ(ಪ.ಜಾ) ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಮಂಗಳವಾರ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಾಲೂಕು ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದ್ದಾರೆ. ರಮೇಶ ಶರಣಪ್ಪ ಯಾಕಾಪುರ (ಬಿಜೆಪಿ), ಬಸವರಾಜ ನಾಗಪ್ಪ (ಪಕ್ಷೇತರ), ಬಸವರಾಜ ಮಲ್ಲಯ್ಯ ವಾಡಿ (ಪಕ್ಷೇತರ), ಸಂದೀಪ ಬಾಬು ಚವ್ಹಾಣ (ಪಕ್ಷೇತರ), ಓಂರಾಜ್ ಲೋಕೇಶ (ಪಕ್ಷೇತರ) ಮುಂತಾದವರು ತಲಾ ಒಂದೊಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಒಟ್ಟು 12 ನಾಮಪತ್ರಗಳು ಬಂದಿವೆ ಎಂದು ಡಿ. ಮಂಜುನಾಥ ತಿಳಿಸಿದ್ದಾರೆ.