ವಿಠಲ ಶೆಟ್ಟಿಗೆ 'ಪಾತಾಳ ಪ್ರಶಸ್ತಿ' ಪ್ರದಾನ
ಎಡನೀರು: ಕಲೆಯನ್ನು ಆರಾಧಿಸಿದಾಗ ಕಲೆಯೂ ಬೆಳಗುತ್ತದೆ. ಕಲಾವಿದನೂ ಬೆಳೆಯುತ್ತಾನೆ. ಇದಕ್ಕಾಗಿ ಪರಿಶ್ರಮ ಬೇಕು ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು. ಇತ್ತೀಚೆಗೆ, ಸೌರಮಾನ ಯುಗಾದಿಯಂದು ಎಡನೀರು ಮಠದ ಶ್ರೀಕೃಷ , ರಂಗಮಂಟಪದಲ್ಲಿ, ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ಎಡನೀರು ವತಿಯಿಂದ ನೀಡಲಾಗುವ ಒಂಭತ್ತನೇ ವರುಷದ 'ಪಾತಾಳ ಪ್ರಶಸ್ತಿ 2013'ನ್ನು ಹಿರಿಯ ನೃತ್ಯಗುರು ಮಾಸ್ಟರ್ ವಿಠಲ ಶೆಟ್ಟಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಹಾರ, ಶಾಲು, ಗುಣಕಥನ ಫಲಕ, ಸ್ಮರಣಿಕೆ, ಫಲದೊಂದಿಗೆ ನಗದು 5 ಸಾವಿರವನ್ನು ಸ್ವಾಮೀಜಿ ಪ್ರದಾನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ , ಾಟಕ ಬ್ಯಾಂಕ್ ಅಧ್ಯಕ್ಷ ಕೆ.ಅನಂತಕೃಷ , ಮಾತನಾಡಿ, ವಿದ್ಯೆ ಇಂದು ವ್ಯಾಪಾರವಾಗುತ್ತಿದೆ. ದಾನ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದರು. ಬಳಿಕ ಶ್ರೀ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಯಕ್ಷಗಾನ ಬಯಲಾಟ ಜರುಗಿತು. ಪ್ರತಿಷ್ಠಾನದ ಹಿತೈಷಿ ಬೆಂಗಳೂರಿನ ಮಹಮ್ಮದ್ ಅನ್ವರ್ ಬಯಲಾಟ ಆಯೋಜಿಸಿದ್ದರು.