ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಖಾಡದಲ್ಲಿ 68 ಕಲಿಗಳು

Lingaraj Badiger
Updated On : 18 Apr 2013, 11:09 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.17
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರ 32 ಅಭ್ಯರ್ಥಿಗಳಿಂದ 39 ನಾಮಪತ್ರ ಸಲ್ಲಿಕೆಯಾಗಿದ್ದು, ಇದುವರೆಗೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಒಟ್ಟು 68 ಅಭ್ಯರ್ಥಿಗಳಿಂದ 92 ಉಮೇದುವಾರಿಕೆ ಸಲ್ಲಿಕೆಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ತಿಳಿಸಿದ್ದಾರೆ.
ಬುಧವಾರ ಸುರಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು 8 ಅಭ್ಯರ್ಥಿಗಳಿಂದ 11 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಸವರಾಜ ಪಕ್ಷೇತರ ಅಭ್ಯರ್ಥಿಯಾಗಿ 4, ನಂದಕುಮಾರ ಮಾಲಿಪಾಟೀಲ ಬಿಎಸ್ಸಾರ್ ಕಾಂಗ್ರೆಸ್‌ನಿಂದ, ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್‌ನಿಂದ, ರಾಜಾ ಮದನಗೋಪಾಲ ನಾಯಕ ಬಿಜೆಪಿಯಿಂದ, ಚಂದ್ರಶೇಖರ ನಾಯಕ, ಪ್ರಭುಲಿಂಗ, ರಾಮನಗೌಡ ಪಕ್ಷೇತರ ಅಭ್ಯರ್ಥಿಗಳಾಗಿ, ಶಿವರಾಜ್ ಕೆಜೆಪಿಯಿಂದ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಶಹಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ 6 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿವೆ. ಶರಣಪ್ಪ ಸಲಾದಪುರ ಜೆಡಿಎಸ್‌ನಿಂದ 2 ನಾಮಪತ್ರ,  ಗುರುಪಾಟೀಲ ಕೆಜೆಪಿಯಿಂದ 1, ವೀರಣ್ಣಗೌಡ ಮಲ್ಲಾಬಾದಿ ಬಿಜೆಪಿಯಿಂದ 2, ಮಲ್ಲಿಕಾರ್ಜುನ ಬಿಜೆಪಿಯಿಂದ 2 ನಾಮಪತ್ರ, ಅಪ್ಪಾಸಾಹೇಬ ಗೌಡ ಹಾಗೂ ಅಮರಣ್ಣ ಪಕ್ಷೇತರ ಅಭ್ಯರ್ಥಿಯಾಗಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಗುರುಮಠಕಲ್: ಈ ವಿಧಾನಸಭಾ ಕ್ಷೇತ್ರದಿಂದ 9 ಅಭ್ಯರ್ಥಿಗಳಿಂದ ಒಟ್ಟು 10 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಿ.ಕಣ್ಣಯ್ಯ ಸ್ವತಂತ್ರ, ಅನಿಲಕುಮಾರ ಸ್ವತಂತ್ರ, ಅಮರೇಶ್ವರ ಸ್ವತಂತ್ರ, ಬಾಬು ಬಿಎಸ್ಸಾರ್ ಕಾಂಗ್ರೆಸ್‌ನಿಂದ, ಸತ್ಯನಾರಾಯಣ ಯಾದವ ಸಮಾಜವಾದಿ ಪಕ್ಷದಿಂದ, ಚಂದ್ರಶೇಖರ ಸ್ವತಂತ್ರ ಅಭ್ಯರ್ಥಿಯಾಗಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಬಾಬುರಾವ ಚಿಂಚನಸೂರ ಕಾಂಗ್ರೆಸ್‌ನಿಂದ 2 ನಾಮಪತ್ರ, ಶಿವಲಿಂಗಪ್ಪ ಬಿಸ್ಪಿಯಿಂದ, ಮಲ್ಲಿಕಾರ್ಜುನ ಸ್ವತಂತ್ರ ಅಭ್ಯರ್ಥಿಯಾಗಿ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಯಾದಗಿರಿ: ವಿಧಾನಸಭಾ ಕ್ಷೇತ್ರದಿಂದ 9 ಅಭ್ಯರ್ಥಿಗಳಿಂದ ಒಟ್ಟು 9 ನಾಮಪತ್ರ ಸಲ್ಲಿಕೆಯಾಗಿವೆ. ಮಹ್ಮದ ಆರಿಫ್ ಜೆಡಿಎಸ್‌ನಿಂದ, ಅನಂತರೆಡ್ಡಿ ಪಕ್ಷೇತರ, ಚಂದ್ರಶೇಖರ ಬಿಜೆಪಿಯಿಂದ, ಸಿದ್ರಾಮಪ್ಪ ಪಕ್ಷೇತರ, ಪ್ರವೀಣಕುಮಾರ ಪಕ್ಷೇತರ, ಶೇಖ್ ಜಹೀರುದ್ದೀನ್ ಪಕ್ಷೇತರ, ಡಾ. ಎ.ಬಿ. ಮಾಲಕರೆಡ್ಡಿ ಕಾಂಗ್ರೆಸ್‌ನಿಂದ, ಬಸವರಾಜ ಸದಾಶಿವರೆಡ್ಡಿ ಪಕ್ಷೇತರ ಹಾಗೂ ಬಸವರಾಜ ಮರಗಪ್ಪ ಬಿಎಸ್ಪಿಯಿಂದ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.

ವೆಂಕಟಪ್ಪ ನಾಯಕ ನಾಮಪತ್ರ ಸಲ್ಲಿಕೆ
ಸುರಪುರ: ಮಾಜಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
  ವಸಂತ ಮಹಲ್ ಆವರಣದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನನ್ನು ತೆರದ ಜೀಪಿನಲ್ಲಿ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಶೇಖರಗೌಡ ವಜ್ಜಲ್, ಸೂಲಪ್ಪ ಕಮತಗಿ, ಶಿವಣ್ಣ ಮಂಗ್ಯಾಳ, ಬಸನಗೌಡ ಯಡಿಯಾಪುರ, ಪ್ರಭುಗೌಡ ಪಾಟೀಲ್, ದೊಡ್ಡ ದೇಸಾಯಿ ದೇವರಗೋನಾಲ, ತಿಪ್ಪರಾಜಗೌಡ, ಅಬ್ದುಲ್ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement