ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಸಲಾದಪುರ

Lingaraj Badiger
Updated On : 18 Apr 2013, 11:09 am

ಶಹಾಪುರ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ 20 ತಿಂಗಳ ಆಡಳಿತ, ಅವರ ಜನಪರ ಕಾಳಜಿ ಮತ್ತು ಪಕ್ಷದ ಜಾತ್ಯತೀತ ನಿಲುವು ಮತದಾರರ ಮನದಲ್ಲಿದ್ದು, ಶಹಾಪುರ ಮತಕ್ಷೇತ್ರದ ಜನತೆ ಕಾಂಗ್ರೆಸ್ ಮತ್ತು ಕೆಜೆಪಿಯನ್ನು ತಿರಸ್ಕರಿಸಿ ಬದಲಾವಣೆ ಬಯಸಿ ಜೆಡಿಎಸ್‌ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಶರಣಪ್ಪ ಸಲಾದಪುರ ತಿಳಿಸಿದರು.
 ಜೆಡಿಎಸ್‌ನಿಂದ ಅಧಿಕೃತ ಬಿ ಫಾರ್ಮ್ ಸಲ್ಲಿಸಿ ನಂತರ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಹಾಪುರ ಮತಕ್ಷೇತ್ರದ ಅಭಿವೃದ್ಧಿ ಕೇವಲ ಕಾಗದ ಪತ್ರಗಳಲ್ಲಿ ಆಗಿದೆ. ಮತದಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಿಂದಿನ ಶಾಸಕರು ವಿಫಲರಾಗಿದ್ದಾರೆ.
  ಜೆಡಿಎಸ್ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದ್ದು, ಹೊಸ ಬದಲಾವಣೆಗೆ ಸಜ್ಜಾಗಿದ್ದಾರೆ. ಇದಕ್ಕೆ ಕಾರ್ಯಕರ್ತರಲ್ಲಿನ ಉತ್ಸಾಹವೇ ಸಾಕ್ಷಿಯಾಗಿದೆ. ಕ್ಷೇತ್ರಾದ್ಯಂತ ಪ್ರಚಾರಕ್ಕಾಗಿ ಸಂಚರಿಸುತ್ತಿದ್ದು, ಎಲ್ಲೆಡೆ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement