ಜೇವರ್ಗಿ; ಜೆಡಿಎಸ್ಗೆ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.17
ಜೇವರ್ಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ತಾಲೂಕಿನ ಅರಳಗುಂಡಗಿ ಗ್ರಾಮದ ಗುರುರಾಜ ಮಾಕಾ ಅವರು 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡು ಪಕ್ಷಕ್ಕೆ ಬಲ ತಂದಿದ್ದಾರೆ.
ಪಟ್ಟಣದಲ್ಲಿನ ಪಕ್ಷದ ಕಚೇರಿಯಲ್ಲಿ ಗುರುರಾಜ ಮಾಕಾ ಅವರು ಸುಮಾರು 50 ಗ್ರಾಮಸ್ಥರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಪಕ್ಷದ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರು ಪಕ್ಷದ ಕ್ಯಾಪ್ ತೊಡಿಸಿ ಸ್ವಾಗತಿಸಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ: ಯಾಳವಾರ ಗ್ರಾಮದ ಕುಂಚಿಗಟರ ಕುಂಬಾರ ಯುವಕ ಸಂಘದ ಸದಸ್ಯರಾದ ಈಶಪ್ಪ ಯಾಳವಾರ, ಮಲ್ಲಪ್ಪ, ಶಾಂತಪ್ಪ, ರೇವಣಪ್ಪ, ಮಾನಪ್ಪ, ಮರೆಪ್ಪ, ಮಲ್ಲಪ್ಪ, ಸಿದ್ರಾಮಪ್ಪ, ಶೆಟ್ಟಪ್ಪ, ಮಾನಪ್ಪ, ಅಮಲಪ್ಪ, ಈರಪ್ಪ, ಬಸಪ್ಪ.
ರಂಜುಣಗಿ ಗ್ರಾಮದ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಖಸೀಮ ಪಟೇಲ್, ಆಕೈರ್, ತಿಪ್ಪಣ್ಣ ಮಾದರ, ಮುರುತುಜಾ ಯಾಲವಾರ, ಸಿದ್ದಪ್ಪ ನಾಗವಿ, ಭಾಗಣ್ಣ ನಾಯ್ಕೋಡಿ, ಶಮಸೂರ ಪಟೇಲ್, ಮಡಿವಾಳಪ್ಪ ಹದಗಲ್ಲ, ಮಹಿಬೂಬ್ ಸಾಬ್, ಕಮಲು ರಾಠೋಡ, ಸಿದ್ದಲಿಂಗ ಎಂಟಮಣಾ.
ಇಜೇರಿ ಗ್ರಾಮದ ಕೆಜೆಪಿ ಕಾರ್ಯಕರ್ತರಾದ ಹಣಮಂತ ದೊರೆ, ಕುಮಾರ ದೊರೆ, ಮಲ್ಲಿಕಾರ್ಜುನ ದೊರೆ, ಮೋಹನ, ಸಲೀಂ, ಬಸವರಾಜ, ಕೃಷ್ಣಾ, ದೇವೆಂದ್ರ ದೊರೆ, ಅಂಬರೀಷ, ಅಯ್ಯಪ್ಪ, ಫಾರೂಖ್, ಮರಿಯಪ್ಪ, ಮೈನೊದ್ದೀನ್, ಅಲ್ಲಾ ಭಾಷಾ, ರಾಜುಗೌಡ, ಬಾಬಾ ರುಕ್ಮುದ್ದೀನ್.
ಕೊಳಕೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶಾಂತಕುಮಾರ ನೊಲ್ಲಿನ, ಲೋಹಿತ ದೊನನ್, ಪ್ರಶಾಂತ ದನ್ನೂರ, ಶಾಂತಪ್ಪ ಹಮಗರಗಿ, ಬಸವರಾಜ ನೊಲ್ಲಿನ, ಅಪ್ಪಾರಾಯ ಕಟ್ಟಿ, ಮರೆಪ್ಪ ಕಟ್ಟಿ, ಬಸವರಾಜ ಕಟ್ಟಿ, ಸುರೇಶ, ಶರಣಪ್ಪ, ಬನ್ನೆಪ್ಪ ಸೇರ್ಪಡೆಗೊಂಡರು.
--
'ವಲ್ಯಾಪುರೆಯಿಂದ ಬಿಜೆಪಿಗೆ ದ್ರೋಹ'
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.17
ತಾಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಅನುದಾನ ಮಂಜೂರುಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಹೊರತು ಯಾವ ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿ ಅಲ್ಲ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಶರಣಪ್ಪ ತಳವಾರ ಮತ್ತು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ತನ್ನ 5 ವರ್ಷ ಅವಧಿಯಲ್ಲಿ ಎಲ್ಲ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯ ನೀಡಲಾಗಿದೆ ಎಂದರು.
ಕೋಲಿ ಸಮಾಜಕ್ಕೆ 10 ಕೋಟಿ ನೀಡಿದ್ದು, ಇದರಲ್ಲಿ ಜಿಲ್ಲೆಗೆ 3 ಕೋಟಿ ನೀಡಲಾಗಿದೆ. ಕಾಂಗ್ರೆಸ್ ದೇಶದಲ್ಲಿ 40 ವರ್ಷ ಅಧಿಕಾರ ನಡೆಸಿದರೂ ಬಂಜಾರ ಜನಾಂಗಕ್ಕೆ ಸೌಲಭ್ಯ ನೀಡಲಿಲ್ಲ. ರಾಜ್ಯ ಬಿಜೆಪಿ ಸರ್ಕಾರದಿಂದ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದರ ಮೂಲಕ ಸೇವಾಲಾಲ್ ಭವನ ನಿರ್ಮಿಸಲಾಗಿದೆ ಮತ್ತು ಲಂಬಾಣಿ ಜನರಿಗೆ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ವಲ್ಯಾಪುರೆಯಿಂದ ಪಕ್ಷಕ್ಕೆ ದ್ರೋಹ: ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಗೊಂಡು ಶಾಸಕ ಮತ್ತು ಸಚಿವರಾಗಿ ಆಯ್ಕೆಯಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅವರನ್ನು ಈ ಸಲ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಕೇವಲ ಮಾಜಿ ಸಿಎಂ ಯಡಿಯೂರಪ್ಪನವರ ಸಾಧನೆ ಮೇಲೆ ಮತ ಕೇಳುತ್ತಿದ್ದಾರೆ ಅವರು ಯಾವ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಧನೆ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದ ಅವರು, ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರಿಗೆ ಮತ ಕೇಳುವ ಹಕ್ಕಿಲ್ಲ ಎಂದರು.
ಬಿಜೆಪಿ ಸರ್ಕಾರದ ಸಾಧನೆಯಿಂದ ಚಿಂಚೋಳಿ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಯಾಕಾಪುರ ಅವರು ಗೆಲವು ಖಚಿತ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಮುಕುಂದ ದೇಶಪಾಂಡೆ, ತಾಪಂ ಸದಸ್ಯ ಶಾಮಸುಂದರ ಪವಾರ, ಶಶಿಕಲಾ ತೆಂಗಳಿ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಮುಕುಂದರಾವ ಕೊಡದುರ ಇದ್ದರು.