ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀತಿ ಸಂಹಿತೆ ಪಾಲಿಸುವಂತೆ ಚುನಾವಣಾಧಿಕಾರಿ ಸೂಚನೆ

Lingaraj Badiger
Updated On : 18 Apr 2013, 11:05 am

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.17
ಚುನಾವಣೆಗೆ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿ ಚುನಾವಣೆ ಮುಗಿಯುವವರೆಗೆ ಒಟ್ಟು 16 ಲಕ್ಷ ಮಾತ್ರ ಖರ್ಚು ಮಾಡಲು ಚುನಾವಣೆ ಆಯೋಗ ನಿಗದಿ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಚಂದ್ರಶೇಖರ ದೊಡ್ಮನಿ ತಿಳಿಸಿದ್ದಾರೆ.
ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಕುರಿತು ವಿವಿಧ ಪಕ್ಷಗಳ ಮುಖಂಡರಿಗಾಗಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿ ಅವರು, ಚುನಾವಣೆ ಆಯೋಗ ಜಾರಿಗೊಳಿಸಿದ ಮಾದರಿ ನೀತಿ ಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ಮುಖಂಡರು ಕಡ್ಡಾಯವಾಗಿ ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.
ನೀತಿ ಸಂಹಿತೆ ಕಡ್ಡಾಯ: ನೀತಿ ಸಂಹಿತೆ ಪಾಲನೆಗೆ ವಿವಿಧ ತಂಡಗಳನ್ನು ರಚನೆ ಮಾಡಲಾಗಿದೆ. ಚುನಾವಣೆ ಪ್ರಚಾರಕ್ಕೆ ಆಯೋಗ ನಿಗದಿ ಮಾಡಿರುವ ನೀತಿ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಅನುಮತಿ ಇಲ್ಲದೇ ಯಾವುದೇ ಸಭೆ ಸಮಾರಂಭಗಳು ನಡೆಸುವಂತಿಲ್ಲ. ಪ್ರತಿ ಸಭೆ ಸಮಾರಂಭಕ್ಕೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಇಲ್ಲದೇ ನಡೆಯುವ ಸಭೆ ಸಮಾರಂಭಗಳು ಕಂಡು ಬಂದಲ್ಲಿ ಸಂಬಂಧಿಸಿದ ಸ್ಥಳಕ್ಕೆ ಹೋಗಿ ಕಾರ್ಯಕ್ರಮ ರದ್ದು ಮಾಡಿ ಕಾರ್ಯಕ್ರಮ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
ಅಭ್ಯರ್ಥಿಯ ಲೆಕ್ಕ ಪತ್ರ: ಪ್ರಚಾರಕ್ಕೆ ಬ್ಯಾನರ್, ಬಂಟಿಂಗ್, ಕಟೌಟ್ ಕಟ್ಟುವುದಕ್ಕೆ ಅವಕಾಶವಿಲ್ಲ. ಎಲ್ಲಿಯೂ ಪೋಸ್ಟರ್ ಅಂಟಿಸುವಂತಿಲ್ಲ. ಪರವಾನಗಿ ಪಡೆದ ವಾಹನಗಿಂತ ಹೆಚ್ಚಿನ ವಾಹನಗಳು ಕಂಡುಬಂದರೆ ಅದರ ಖರ್ಚು ವೆಚ್ಚಗಳ ಕುರಿತು ಅಭ್ಯರ್ಥಿಯ ಲೆಕ್ಕ ಪತ್ರ ತೆಗೆದುಕೊಳ್ಳಲಾಗುವುದು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸಂಜೀವಣ್ಣನವರ್ ವಿವಿಧ ತಂಡಗಳ ಅಧಿಕಾರಿಗಳಾದ ವಿಶ್ವರಾಜ, ಅಶೋಕ ಬಿಲಗುಂದಿ, ಫೇರೋಜ್ ಟಿ, ಶಿರಸ್ತೆದಾರ ಶ್ರೀನಿವಾಸ ಹಾಗೂ ವಿವಿಧ ಪಕ್ಷಗಳ ಮುಖಂಡರಾದ ಸೈಯದ್ ಮೀನಾಜೋದ್ದಿನ್ ಚಿಸ್ತಿ, ಲಕ್ಷ್ಮೀಕಾಂತ ಸಾಲಿ, ಗೋಪಾಲ್ ರಾಠೋಡ, ಸಾಬಣ್ಣ, ಬಾಲಾಜಿ ಇದ್ದರು.

ಮತದಾರರ ಜಾಗೃತಿ: ಇಂದು ಫೋನ್-ಇನ್
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಚುನಾವಣೆಯ ಪ್ರಯುಕ್ತ ಮತದಾನದ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೂರದರ್ಶನ ಕೇಂದ್ರದಲ್ಲಿ ಮತದಾರರ ಜಾಗೃತಿ ಅಭಿಯಾನ ಕುರಿತು ಫೋನ್-ಇನ್ ಕಾರ್ಯಕ್ರಮವನ್ನು ಏ.18 ರಂದು ಸಂಜೆ 6.30ರಿಂದ 7ರವರೆಗೆ ಹಮ್ಮಿಕೊಳ್ಳಲಾಗಿದೆ.
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಈ ಕಾರ್ಯಕ್ರಮದಲ್ಲಿ ಸ್ವೀಪ್ ಯೋಜನೆ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವರು. ಕೇಳುಗರು ದೂರದರ್ಶನ ಕೇಂದ್ರದ ದೂ. 08472-220491 ಮತ್ತು 220492ಗಳಿಗೆ ಕರೆ ಮಾಡಬಹುದಾಗಿದೆ.

ನೌಕರರ ಮತ ಚಲಾವಣೆಗೆ ನಮೂನೆ- 12
ಚಿತ್ತಾಪುರ: ಚುನಾವಣೆ ಕರ್ತವ್ಯಕ್ಕೆ ಹಾಜರಿಯಾಗುವ ಸರ್ಕಾರಿ ನೌಕರರು ಮತಚಲಾಯಿಸಲು ನಮೂನೆ 12ನ್ನು ತುಂಬಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಚವ್ಹಾಣಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಚುನಾವಣೆ ಕರ್ತವ್ಯದ ಆದೇಶದ ಜತೆಗೆ ನಮೂನೆ 12ಅನ್ನು ಕಳಿಸಲಾಗಿದೆ. ಪಾರ್ಮ್‌ನಲ್ಲಿದ್ದ ಸಂಪೂರ್ಣ ಮಾಹಿತಿ ತುಂಬಲು ತೊಂದರೆಯಾದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಮನ್ವಯ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಶೀರ್ ಅಹ್ಮದ್- 97404 80430, ಮಾಣಿಕ- 95354 21506, ಲಕ್ಷ್ಮಿಕಾಂತ- 97317 97527,  ದಶರಥ ರಾಠೋಡ- 97426 26222, ರಾಜು- 8050867656  ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement