ರಾಜುಗೌಡ ಬಿರುಸಿನ ಪ್ರಚಾರ
ಸುರಪುರ: ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ರಾಜುಗೌಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದರು. ತಾಲೂಕಿನ ಆಲ್ದಾಳ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಗ್ರಾಮದ ನೂರಾರು ಕಾರ್ಯಕರ್ತರು ರಾಜುಗೌಡರ ಸಮ್ಮುಖ ಜೆಡಿಎಸ್ ಸೇರಿದರು.
ನಂತರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಗ್ರಾಮದ ಹಲವಾರು ಮುಖಂಡರು ಮತ್ತು ಯುವಕರು ನನ್ನ ಮೇಲೆ ವಿಶ್ವಾಸವಿಟ್ಟು ನೂರಾರು ಸಂಖ್ಯೆಯಲ್ಲಿ ಪಕ್ಷ ಸೇರಿದ್ದು ನನಗೆ ಆನೆ ಬಲಬಂದಂತಾಗಿದೆ. ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ವಿಜಯ ಪತಾಕೆ ಹಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಸೇರ್ಪಡೆ: ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರಿದರು. ಹಂದ್ರಾಳ ಗ್ರಾಮದ ಯಂಕಾರಡ್ಡಿ ಶಾರದಳ್ಳಿ, ಸಂಗಣ್ಣ ಸರ್ಜಾಪುರ, ಅಯ್ಯಣ್ಣ ಸರ್ಜಾಪುರ, ದೇವಿಂದ್ರಪ್ಪ ಮಾಲಿ ಪಾಟೀಲ, ಗೋವಿಂದ ಪೂಜಾರಿ, ಗೋಪಾರಡ್ಡಿ ಶಾರದಳ್ಳಿ, ಸಂಜೀವರಡ್ಡಿ, ರಾಮಪ್ಪ ಹರಿಜನ. ದೇವಿಕೇರಿ ಗ್ರಾಮದ ಹೊನ್ನಪ್ಪ ಬೇವಿನಗಿಡ, ಅಯ್ಯಪ್ಪ ಮೂಲಿಮನಿ, ತಿಮ್ಮಣ್ಣ ಸಿದ್ದಾಪೂರ, ಮಲ್ಲಪ್ಪ ಬೇವಿನಗಿಡ, ಮರಿಲಿಂಗ, ಮಲ್ಲಪ್ಪ ಮರ್ಮಕಲ್, ಮಾನಪ್ಪ ಸಿದ್ದಾಪುರ, ಶೇಖಪ್ಪ ಕಾಡಮಗೇರಾ ಇತರರು ಸೇರಿದರು. ಚಿಕ್ಕನಳ್ಳಿ ಗ್ರಾಮದ ನಾಗಪ್ಪ ದೊರೆ, ಭೀಮಣ್ಣ ದೊರೆ, ಹಣ್ಮಂತ ದೊರೆ, ಶಿವಣ್ಣ, ರಾಮಣ್ಣ ಸಗರ, ನಂದಪ್ಪ ಕುಂಬಾರ, ಶಿವಣ್ಣ ಕೋಳೂರು, ಖಾಜಾಸಾಬ ಪೀರಾಪೂರ, ಮಲ್ಲಪ್ಪ ದೊರೆ, ಅಂಬ್ರೇಶದೊರೆ, ಲೋಕೇಶ ಜಹಾಗೀರದಾರ ಸೇರಿದಂತೆ ಹಲವಕು ಸೇರ್ಪಡೆಯಾದರು.